Site icon Suddi Belthangady

2.50 ಲಕ್ಷ ಮೌಲ್ಯದ ಚಿನ್ನ ಹಾಗೂ 10 ಸಾವಿರ ನಗದು ಮರಳಿಸಿ‌ ಪ್ರಾಮಾಣಿಕತೆ ಮೆರೆದ ವಿನಯ್ ನಿವೇದಿತಾ

ಬೆಳ್ತಂಗಡಿ: ತಾಲೂಕು ಬಂದಾರು ಗ್ರಾಮ ಅಂಡಿಲ ನಿವಾಸಿ ರಕ್ಷಿತ್ ಅವರ ಪತ್ನಿ ದೀಕ್ಷ ರಕ್ಷಿತ್ ರವರ ರೂ 2.50 ಲಕ್ಷ ಮೌಲ್ಯದ ಚಿನ್ನ ಹಾಗೂ 10 ಸಾವಿರ ನಗದು ಇದ್ದ ಪರ್ಸ್ ಉಪ್ಪಿನಂಗಡಿ ಹೋಟೆಲ್ ನಲ್ಲಿ ಡಿ.10ರಂದು ಕೈ ತಪ್ಪಿ ಕಳೆದು ಹೋಗಿತ್ತು. ಮನೆಗೆ ಹೋಗಿ ನೋಡುವಾಗ ಚಿನ್ನ, ನಗದು ಕಳೆದುಹೋಗಿರುವ ಬಗ್ಗೆ ಅರಿವಾಗುತ್ತೆ. ತಕ್ಷಣ ತನ್ನ ಸಂಬಂಧಿಕರಲ್ಲಿ ತಿಳಿಸಿ ಹೋಟೆಲ್ ನಲ್ಲಿ ವಿಚಾರಿಸಲು ತಿಳಿಸಿದರು. ಅದೇ ರೀತಿಯಲ್ಲಿ ಡಿ. 11ರಂದು ಬಜತ್ತೂರು ಗ್ರಾಮ ವಳಾಲು ಬೆದ್ರೋಡಿ ವಿದ್ಯಾನಗರ ಮಂತ್ರ ನಿಲಯ ನಿವಾಸಿ ವಿನಯ್ ನಿವೇದಿತಾ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಯ ನಂತರ ವಾರಸುದಾರರಿಗೆ ಚಿನ್ನ, ನಗದು ಹಸ್ತಾಂತರ ಮಾಡಿದರು. ದೀಕ್ಷಾ ರಕ್ಷಿತ್ ದಂಪತಿಗಳು ಕೃತಜ್ಞತೆ ಸಲ್ಲಿಸಿ, ಸನ್ಮಾನಿಸಿದರು. ಉಪ್ಪಿನಂಗಡಿ ಪೊಲೀಸ್ ಅಧಿಕಾರಿ ವರ್ಗಕ್ಕೂ ಕೃತಜ್ಞತೆ ಸಲ್ಲಿಸಿದರು.

Exit mobile version