Site icon Suddi Belthangady

ಕೊರಿಂಜ: ಶ್ರೀ ಪಂಚಲಿಂಗೇಶ್ವರ ಭಜನಾ ತಂಡದ ಸಮವ‌ಸ್ತ್ರ ವಿತರಣೆ ಕಾರ್ಯಕ್ರಮ

ಬೆಳ್ತಂಗಡಿ: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಪಂಚಲಿಂಗೇಶ್ವರ ಭಜನಾ ತಂಡದ ಸಮವ‌ಸ್ತ್ರ ವಿತರಣಾ ಕಾರ್ಯಕ್ರಮವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೊರಿಂಜದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕಾರ್ತಿಕ್ ಹೆಗ್ಡೆ ಅವರು ವಿತರಿಸಿದರು. ಬಳಿಕ ಮಾತನಾಡಿದ ಅವರು ಸಮವಸ್ತ್ರ ಮಾಡಿರುವುದರಿಂದ ಭಜನೆಗೆ ಇನ್ನಷ್ಟು ಮೆರುಗು ನೀಡುತ್ತವೆ. ಭಜನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ, ಆಯಸ್ಸು, ಆರೋಗ್ಯ ವಿದ್ಯಾರ್ಥಿಗಳಲ್ಲಿ ಹೆಚ್ಚಾಗುತ್ತದೆ. ಸಂಸ್ಕೃತಿಯನ್ನು ಬಿಂಬಿಸುವಂತಹ ಕೆಲಸವನ್ನು ಭಜನೆಯಿಂದ ಮಾಡಲು ಸಾಧ್ಯ ಅಂತ ಎಂದು ಹಿತನುಡಿಗಳನ್ನು ಹೇಳಿದರು.

ಧ.ಗ್ರಾ.ಯೋಜನೆಯ ನಿವೃತ್ತ ಮೇಲ್ವಿಚಾರಕಿ ವಾರಿಜ ವಿ. ಶೆಟ್ಟಿ, ಉರುವಾಲು ಗ್ರಾಮದ ಸೇವಾ ಪ್ರತಿನಿಧಿ ಸೀತಾರಾಮ ಆಳ್ವ ಕೊರಿಂಜ ಹಾಗೂ ಭಜನಾ ಗುರುಗಳಾದ ನಾಗೇಶ್ ನೆರಿಯ, ಗಗನ್ ಕಣಿಯೂರು, ಗಣೇಶ್ ಗೌಡ ಬನಾರಿ, ಪ್ರದೀಪ್ ನಾಯ್ಕ ಆನಡ್ಕ, ಚರಣ್ ಕೋರಿಂಜ, ಧನಂಜಯ, ದಯಾನಂದ ಬನಾರಿ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

Exit mobile version