ಉಜಿರೆ: ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ ಜರುಗಿತು. ಕ್ರೀಡಾಕೂಟದ ಉದ್ಘಾಟನೆಯನ್ನು ಎಸ್.ಡಿ.ಎಂ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ರಮೇಶ್ ಹೆಚ್. ಉದ್ಘಾಟಿಸಿದರು.
ಆತ್ಮವಿಶ್ವಾಸದಿಂದ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸಲು ಕ್ರೀಡೆಯು ಬಹಳ ಮುಖ್ಯವಾದ ಸಾಧನದಂತಿದೆ. ಕ್ರೀಡೆಯಲ್ಲಿ ಪ್ರಶಸ್ತಿ ಗಳಿಸುವುದಕ್ಕಿಂತ ಭಾಗವಹಿಸುವುದು ಬಹಳ ಮುಖ್ಯ, ಅ ಮೂಲಕ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಬಹುದು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಎಸ್.ಡಿ. ಎಮ್. ಸಿ.ಬಿ.ಎಸ್.ಸಿ ಶಾಲಯ ಪ್ರಾಂಶುಪಾಲ ಮನಮೋಹನ್ ನಾಯಕ್ ಕೆ.ಜಿ. ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅವರು ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾಲೇಜಿನ ಉಪ ಪ್ರಾಂಶುಪಾಲ ಮನಿಶ್ ಕುಮಾರ್ ಉಪಸ್ಥಿತರಿದ್ದರು. ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಪಥಸಂಚಲನ ನಡೆಯಿತು. ಕ್ರೀಡಾಕೂಟದ ಸಂಪೂರ್ಣ ಜವಾಬ್ದಾರಿಯನ್ನು ಕಾಲೇಜಿನ ಹಿರಿಯ ವಸತಿ ನಿಲಯ ಪಾಲಕ ವಿಶ್ವನಾಥ್ ಹಾಗೂ ಗಣಕ ಶಾಸ್ತ್ರ ಉಪನ್ಯಾಸಕ ಪವಿತ್ರ ಕುಮಾರ್ ಅವರು ವಹಿಸಿದ್ದರು.
ದೈಹಿಕ ಶಿಕ್ಷಕ ಲಕ್ಷ್ಮಣ್ ಜಿ.ಡಿ. ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಭೌತ ಶಾಸ್ತ್ರ ವಿಭಾಗ ಮುಖ್ಯಸ್ಥ ರಮೇಶ್ ಬಾಬು ಸ್ವಾಗತಿಸಿದರು.
ಗಣಿತ ಶಾಸ್ತ್ರದ ಉಪನ್ಯಾಸಕ ಕೃಷ್ಣ ಪ್ರಸಾದ್ ಹಾಗೂ ಪ್ರಿಯ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಕವಿತಾ ಉಮೇಶ್ ವಂದಿಸಿದರು.

