ಬಂದಾರು: ದೇಶದ ಸೈನ್ಯದಲ್ಲಿ ಅನನ್ಯ ಸೇವೆಗೈದು ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಮೊಗ್ರು ಗ್ರಾಮ ಮುಗೇರಡ್ಕದ ಅಶೋಕ್ ಪಿ.ಎಲ್.ರಿಗೆ ಬಂದಾರು ಪಂಚಾಯತ್ ನಲ್ಲಿ ಡಿ. 9ರಂದು ಸನ್ಮಾನ ಕಾರ್ಯಕ್ರಮ ನೆರವೇರಿತು.
ಅಶೋಕ್ ತಾಯಿ ಕುಸುಮ, ಪತ್ನಿ ಚೇತನ ಮತ್ತು ಮಕ್ಕಳು, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷೆ ಪುಷ್ಪಾವತಿ ಬರಮೇಲು, ಕಣಿಯೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಬಂದಾರು ಗ್ರಾಮ ಪಂಚಾಯತ್ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ, ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ, ಪರಮೇಶ್ವರಿ ಕೆ. ಗೌಡ ಪುಯಿಲ, ಭಾರತಿ ಕೊಡಿಯೇಲು, ಪದ್ಮುಂಜ ಸಿ.ಎ. ಬ್ಯಾಂಕ್ ನಿರ್ದೇಶಕ ಪ್ರಭಾಕರ ಗೌಡ ಗುತ್ಯೋಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ, ಗ್ರಾಮ ಆಡಳಿತ ಅಧಿಕಾರಿ ರಫೀಕ್ ಮುಲ್ಲಾ, ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

