ಬೆಳ್ತಂಗಡಿ: 19ನೇ ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ, ಕಥಾಗೋಷ್ಠಿಗೆ ಬರಹಗಳ ಆಹ್ವಾನ. ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ಡಿ. 28ರಂದು ನಡೆಯಲಿರುವ ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಮತ್ತು ಕಾರ್ಡಿನಲ್ಲಿ ಕಥಾಗೋಷ್ಠಿಗೆ ತಾಲೂಕು ವ್ಯಾಪ್ತಿಯ ಬರಹಗಾರರಿಂದ ಬರಹಗಳನ್ನು ಆಹ್ವಾನಿಸಲಾಗಿದೆ.
ಕವಿಗಳು 20 ಸಾಲುಗಳನ್ನು ಮೀರದಂತೆ ಒಂದು ಕವಿತೆಯನ್ನು ಮತ್ತು ಕಥೆಗಾರರು ಪೋಸ್ಟ್ ಕಾರ್ಡಿನಲ್ಲಿ ತುಂಬುವಷ್ಟು ಒಂದು ಕಥೆಯನ್ನು ಬರೆದು ಇವುಗಳ ಭಾವಚಿತ್ರವನ್ನು ಆಯ್ಕೆಗಾಗಿ 9902032480 ಈ ವಾಟ್ಸಪ್ ನಂಬರ್ ಗೆ ದಿನಾಂಕ 17.12.2025ರೊಳಗೆ ಕಳಿಸಿಕೊಡುವುದು. ಆಯ್ಕೆಯಾದವರಿಗೆ ಒಂದು ಕವಿತೆ ಇಲ್ಲವೇ ಒಂದು ಕಥೆಯನ್ನು ವಾಚಿಸಲು ಗೋಷ್ಠಿಯಲ್ಲಿ ಅವಕಾಶವಿರುತ್ತದೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆ ನೀಡಿರುತ್ತಾರೆ.ಹೆಚ್ಚಿನ ಮಾಹಿತಿಗೆ 9902032480, 9449640130 ಸಂಪರ್ಕಿಸಬಹುದು.
