Site icon Suddi Belthangady

ಸುಮಂತ್ ಕುಮಾರ್ ಜೈನ್ ರಿಂದ “ದಿ ರೋಟರೀ ಇಂಟರ್ ನ್ಯಾಷನಲ್ ಫಂಡ್” ಗೆ 90,000/- ಕೊಡುಗೆ

ಬೆಳ್ತಂಗಡಿ: ರೋಟರಿ ಸಂಸ್ಥೆಯಲ್ಲಿ ಮಾನವೀಯ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಉದ್ದೇಶದಿಂದ, ರೋಟರಿ ಫೌಂಡೇಶನ್‌ಗೆ ಕನಿಷ್ಠ 1,000 ದೇಣಿಗೆ ನೀಡಿದ ವ್ಯಕ್ತಿಗಳಿಗೆ PHF ಅಥವ ಪೌಲ್ ಹ್ಯಾರಿಸ್ ಫೆಲೋ (Paul Harris Fellow) ಎಂಬ ಗೌರವ ನೀಡಿ ಗೌರವಿಸಲಾಗುತ್ತದೆ. ರೋಟರೀ ಕ್ಲಬ್ ನ ಜನಕ ಪೌಲ್ ಹ್ಯಾರಿಸ್ ಹೆಸರಿನಲ್ಲಿ ಕೊಡಲ್ಪಡುವ ಈ ಪ್ರತಿಷ್ಠೆಯ ಗೌರವ, ಸರ್ಟಿಫಿಕೇಟ್ ಮತ್ತು ಚಿನ್ನದ ಬಣ್ಣದ ಪಿನ್ ಒಳಗೊಂಡಿರುತ್ತದೆ. ಬೆಳ್ತಂಗಡಿ ಕ್ಲಬ್ಬಿನ ಹೆಮ್ಮೆಯ ಸದಸ್ಯ, ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷರೂ ಆಗಿರುವ ಸುಮಂತ ಕುಮಾರ್ ಜೈನ್ ಇದೀಗ ಆ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ರೋಟರೀ ಕ್ಲಬ್ ಅಧ್ಯಕ್ಷ ರೋ. ಪ್ರೊ. ಪ್ರಕಾಶ ಪ್ರಭು ತಮ್ಮ ಪ್ರಕಟಣೆಯಲ್ಲಿ ಹೇಳಿದರು. ಅದೇ ರೀತಿ 2,000 ಮತ್ತು 10,000 ನೀಡಿ ಕ್ರಮವಾಗಿ ಮಲ್ಟಿಪಲ್ ಪೌಲ್ ಹ್ಯಾರಿಸ್ ಫೆಲೊ (MPHF) ಮತ್ತು ಮೇಜರ್ ಡೋನರ್ ಗೌರವವನ್ನು ಪಡೆಯಬಹುದಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದರು.

Exit mobile version