Site icon Suddi Belthangady

WIM ನಿಯೋಗದಿಂದ ಬೆಳ್ತಂಗಡಿ ಡಿ.ವೈ.ಎಸ್‌.ಪಿ ಭೇಟಿ

ಬೆಳ್ತಂಗಡಿ: ವಿಮೆನ್ ಇಂಡಿಯಾ ಮೂವ್ ಮೆಂಟ್ (WIM) ಬೆಳ್ತಂಗಡಿ ಕ್ಷೇತ್ರ ಸಮಿತಿ ನಿಯೋಗವು ಬೆಳ್ತಂಗಡಿ ಪೊಲೀಸ್ ಉಪವಿಭಾಗ ಡಿ.ವೈ.ಎಸ್‌.ಪಿ ಸಿ.ಕೆ. ರೋಹಿಣಿ ಅವರ ಕಛೇರಿಗೆ ಡಿ.6ರಂದು ಭೇಟಿ ನೀಡಿತು. ಅಧಿಕಾರಿಯೊಂದಿಗೆ ಪ್ರಸ್ತುತ ಕಾಲದಲ್ಲಿ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಮೇಲೆ ನಡೆಯುವ ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳ ತಡೆಯಲು ಪೊಲೀಸ್ ಇಲಾಖೆಯಿಂದ ಕಠಿಣ ಕಾನೂನು ಕ್ರಮಗಳ ಕುರಿತಾಗಿ ಮಾತುಕತೆ ನಡೆಸಿದರು.

ವಿಮ್ ನಿಯೋಗದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷೆ ಶಮಾ ಉಜಿರೆ, ಕಾರ್ಯದರ್ಶಿ ರುಬಿಯಾ ಬೆಳ್ತಂಗಡಿ, ಕೋಶಾಧಿಕಾರಿ ಹಸೀನಾ ಬೆಳ್ತಂಗಡಿ ಹಾಗೂ ಸಮಿತಿ ಸದಸ್ಯರಾದ ಸಫ್ರಾ ಬೆಳ್ತಂಗಡಿ, ಮಸೂದಾ ಉಜಿರೆ ಉಪಸ್ಥಿತರಿದ್ದರು.

Exit mobile version