Site icon Suddi Belthangady

ಬಳಂಜ: ಸ. ಉ. ಹಿ. ಪ್ರಾ.ಮತ್ತು ಪ್ರೌ. ಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮ- ಡಿ.13 ಮತ್ತು 14ರಂದು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ-5000ಕ್ಕೂ ಮಿಗಿಲಾಗಿ ಜನರ ಭಾಗವಹಿಸುವಿಕೆಯ ನಿರೀಕ್ಷೆ- ಪತ್ರಿಕಾಗೋಷ್ಠಿ

ಬೆಳ್ತಂಗಡಿ: ಬಳಂಜ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ, ಅಮೃತ ಮಹೋತ್ಸವ ಸಮತಿ, ಹಳೆ ವಿದ್ಯಾರ್ಥಿಸಂಘ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಇವರ ಸಹಯೋಗದಲ್ಲಿ ನಡೆಯಲಿರುವ ಅಮೃತ ಮಹೋತ್ಸವ ಅಮೃತ ಸಂಭ್ರಮದ ಪೂರ್ವ ತಯಾರಿಯ ಪತ್ರಿಕಾಗೋಷ್ಠಿ ಡಿ.9ರಂದು ಬಳಂಜದ ಅಮೃತ ಮಹೋತ್ಸವದ ಕಾರ್ಯಾಲಯದಲ್ಲಿ ನಡೆಯಿತು.

ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಿ ಕೆ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸುಮಾರು 75 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯೆ ಸುಲಭದಲ್ಲಿ ದೊರಕಬೇಕು ಎಂಬ ದೂರದೃಷ್ಟಿಯಿಂದ ಗ್ರಾಮೀಣ ಪ್ರದೇಶದ ಬಳಂಜದ ಪಟೇಲರಾಗಿದ್ದ ಕಿನ್ನಿ ಯಾನೆ ಕೋಟಿ ಪಡಿವಾಳರು ಆಗ ಸಮಾಜದಲ್ಲಿ ಗುರುತಿಸಲ್ಪಟ್ಟ ಗಣ್ಯರ ನೆರವಿನೊಂದಿಗೆ ಆರಂಭಿಸಿದ ಈ ಶಾಲೆಯಲ್ಲಿ ಡಿ.13ರಂದು ಶಾರದಾ ಕಲಾ ಮಂಟಪ ಕೀರ್ತಿಶೇಷ ಪಟೇಲ್ ಕಿನ್ನಿ ಯಾನೆ ಕೋಟಿ ಪಡಿವಾಳ ಸಭಾ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಸಭಾ ಕ್ಷೇತ್ರದ ಸ್ಪೀಕರ್ ಯುಟಿ ಖಾದರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಘನ ಉಪಸ್ಥಿತಿ ಇರಲಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರುಗಳಾದ ಎಸ್.ಯಲ್. ಭೋಜೇಗೌಡ, ಐವನ್ ಡಿ’ಸೋಜ, ಪ್ರತಾಪ್ ಸಿಂಹ ನಾಯಕ್, ಮಂಜುನಾಥ್ ಭಂಡಾರಿ, ಧನಂಜಯ ಸರ್ಜಿ, ಕಿಶೋರ್ ಕುಮಾರ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಬಳಂಜ ಗ್ರಾಮ ಪಂಚಾಯತ್ ಶೋಭಾ ಕುಲಾಲ್, ವಿಶೇಷ ಆಹ್ವಾನಿತರಾಗಿ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಮೋಹನ್ ಆಳ್ವ, ಉದ್ಯಮಿ ಶಶಿಧರ್ ಶೆಟ್ಟಿ, ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಗೌರವ ಉಪಸ್ಥಿತರಾಗಿ ದಕ್ಷಿಣ ಕನ್ನಡ ವಿದ್ಯಾಂಗ ಉಪ ನಿರ್ದೇಶಕ ಜಿ.ಯಸ್ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಎಸ್.ಡಿ.ಎಮ್.ಸಿ ಕಾರ್ಯಾಧ್ಯಕ್ಷ ಕೆ. ವಸಂತ್ ಸಾಲಿಯಾನ್, ಎಸ್.ಡಿ.ಎಮ್ ಬಳಂಜ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ರತ್ನಾಕರ ಪೂಜಾರಿ ಉಪಸ್ಥಿತಿ ಇರಲಿದ್ದಾರೆ.

ಡಿ.13 ರಂದು ಮಧ್ಯಾಹ್ನ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಂಜ ಗ್ರಾಮ ಪಂಚಾಯತ್‌ಗೊಳಪಟ್ಟ ಅಂಗನವಾಡಿ ಮಕ್ಕಳಿಂದ ನೃತ್ಯ ಪ್ರದರ್ಶನ, ಬಳಂಜ ಶಾಲಾ ಎಲ್.ಕೆ.ಜಿ., ಯು.ಕೆ.ಜಿ. ಉನ್ನತೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಂದ ಹಾಡು-ನೃತ್ಯ ರೂಪಕ ಕೂಡಿದ ವೈವಿಧ್ಯಮಯ ಸಾಂಸ್ಕೃತಿಕ ಲೋಕದ ಅನಾವರಣ ಮಕ್ಕಳ ಸಂಭ್ರಮ. ಸಂಜೆ 6 ರಿಂದ ಮಂಗಳೂರಿನ ಹೆಸರಾಂತ ಕಲಾವಿದ ಐಟಿ. ದೇವದಾಸ್ ಕಾಪಿಕಾಡ್ ನೇತೃತ್ವದಲ್ಲಿ ನವೀನ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಸಾಯಿ ಕೃಷ್ಣ ಅಪೂರ್ವ ಸಂಗಮದಲ್ಲಿ ಕಲಾ ರಸಿಕರ ಬಹು ಬೇಡಿಕೆಯ ನಾಟಕ “ಪುದರ್ ದೀತಿಜಿ” ಪ್ರದರ್ಶನಗೊಳ್ಳಲಿದೆ.

ಡಿ. 14 ರಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣಗೊಳ್ಳಲಿದೆ. ಧ್ವಜಾರೋಹಣವನ್ನು ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ರವಿ ಹೆಗಡೆ ಮಾಡಲಿದ್ದಾರೆ. ಅಳದಂಗಡಿ ಅರಮನೆ ಅರಸರಾದ ತಿಮ್ಮಣ್ಣರಸರಾದ ಡಾ| ಪದ್ಮ ಪ್ರಸಾದ್ ದೀಪ ಪ್ರಜ್ವಲನೆಯನ್ನು ಮಾಡಲಿದ್ದಾರೆ. ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಪಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ನಳೀನ್ ಕುಮಾರ್ ಕಟೀಲ್, ಖ್ಯಾತ ಸಾಹಿತಿ ವಾಗ್ಮಿ ಡಾ.ನಾ. ಸೋಮೇಶ್ವರ, ಚಲನ ಚಿತ್ರ ಮತ್ತು ರಂಗಭೂಮಿ ಕಲಾವಿದ ಸುಚೇಂದ್ರ ಪ್ರಸಾದ್, ಪತ್ರಕರ್ತ ಜೋಗಿ, ಉಜಿರೆ ಎಸ್ ಡಿ ಯಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಅಳದಂಗಡಿಯ ಶಿವ ಪ್ರಸಾದ್ ಅಜಿಲರು, ಉದ್ಯಮಿ ಮೋಹನ್ ಕುಮಾರ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಉದ್ಯಮಿ ಬಾಲಕೃಷ್ಣ ಭಟ್, ಕ್ಷೇತ್ರ ಸಮನ್ವಯಧಿಕಾರಿ ಟಿ.ಬಿ. ಬಸವಲಿಂಗಪ್ಪ, ಹೆಚ್ ಧರ್ಣಪ್ಪ ಪೂಜಾರಿ, ಬಳಂಜ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ, ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಕೆ.ಎ ಉಸ್ಮಾನ್ ಉಪಸ್ಥಿತಿ ಇರಲಿದ್ದಾರೆ.

ಡಿ.14 ಮಧ್ಯಾಹ್ನ 2-30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಜ್ಯೋತಿ ಮಹಿಳಾ ಮಂಡಳಿ, ಶ್ರೀ ಉಮಾಮಹೇಶ್ವರ ಯುವಕ ಮಂಡಲ,ಬಳಂಜ, ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಕಾಂತಾರ ಖ್ಯಾತಿಯ ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡು ಹಾಗೂ ತಂಡದವರಿಂದ “ತೆಲಿಕೆದ ಪರ್ಬ” ನಡೆಯಲಿದೆ. ಪ್ರಖ್ಯಾತ ಕಲಾವಿದೆ ಶ್ವೇತಾ ಅರೆಹೊಳೆ ನೇತೃತ್ವದ ಅರೆಹೊಳೆ ಪ್ರತಿಷ್ಠಾನ ನಂದಗೋಕುಲ, ಮಂಗಳೂರು ತಂಡದವರಿಂದ “ಸಾಂಸ್ಕೃತಿಕ ವೈಭವ” ನಡೆಯಲಿದೆ. ಸುಮಾರು 5000 ಜನ ಭಾಗವಹಿಸುವ ನಿರೀಕ್ಷೆ ಇದೆ.

ಬಳಿಕ ಮಾತನಾಡಿದ ಅವರು ಎರಡು ವರ್ಷದಿಂದ ಪೂರ್ವ ತಯಾರಿ ನಡೆಸಿದ್ದೇವೆ. ಸರ್ಕಾರಿ ಶಾಲೆ ಉಳಿಯಬೇಕೆಂದರೆ ಆಂಗ್ಲ ಮಾಧ್ಯಮ ಶಾಲೆಯ ಅಗತ್ಯ ಇತ್ತು. ಹಾಗಾಗಿ ಎಲ್.ಕೆ.ಜಿ, ಯು.ಕೆ.ಜಿ ಯಿಂದ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭ ಮಾಡಿದ್ದೇವೆ. ಬಳಂಜ ಶಿಕ್ಷಣ‌ ಟ್ರಸ್ಟ್ ನವರ ಸಹಾಯದಿಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ ವೇತನ ಸಿಗುತ್ತಿದೆ. ಟ್ರಸ್ಟ್ ನವರ ಹೆಸರನ್ಬು ಆಮಂತ್ರಣ ಪತ್ರಿಕೆಯಲ್ಲಿ ಸಹಯೋಗ ಸಂಸ್ಥೆಯಾಗಿ ತೆಗೆದುಕೊಳ್ಳಲು ಕಾನೂನಿನ ತೊಡಕು ಇತ್ತು, ಹಾಗಾಗಿ ಅವರ ಹೆಸರು ಹಾಕಲಿಲ್ಲ. ಕೆಲವು ಹೆಸರುಗಳು ಕಣ್ತಪ್ಪಿನಿಂದ ಬಿಟ್ಟುಹೋಗಿದೆ. ಹಳೆ ವಿದ್ಯಾರ್ಥಿ ಗಳು ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ಹಳೆ ವಿದ್ಯಾರ್ಥಿ ಅಶ್ವಥ್ ಹೆಗ್ಡೆಯವರು ಶಾಲೆಗೆ ಅವರ ಟ್ರಸ್ಟ್ ಮುಖಾಂತರ ಕೊಠಡಿಗಳಿಗೆ ಟೈಲ್ಸ್ ಹಾಕಿಸಿದ್ದಾರೆ, ಮೆಸ್ಕಾಂ ಅಧ್ಯಕ್ಷರು 15 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಕೊಠಡಿ ಕೊಟ್ಡಿದ್ದಾರೆ. ಸರ್ಕಾರಕ್ಕೂ ಕೆಲವೊಂದು ಮನವಿ ಕೊಟ್ಟಿದ್ದೇವೆ.

ಪ್ರತಾಪ್ ಸಿಂಹ ನಾಯಕ್ ರವರು ಶಾಲೆಗೆ ಟೈಲ್ಸ್ ಹಾಕಲು, ಶಾಸಕರು ಪ್ರತಿ ಬೇಡಿಕೆಗೆ ಸ್ಪಂದಿಸಿದ್ದು ಇಂಟರ್ ಲಾಕ್ ಅಳವಡಿಸಿದ್ದಾರೆ. ತಂಗುದಾಣ ನಿರ್ಮಿಸಿ ಕೊಟ್ಟಿದ್ದಾರೆ. ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಲು 15 ಲಕ್ಷ ನೀಡುತ್ತೇವೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಭರವಸೆ ಕೊಟ್ಟಿದ್ದಾರೆ. ಬೇರೆ ಬೇರೆ ಸಂಘ ಸಂಸ್ಥೆಗಳು ಸಹಾಯ ಮಾಡಿ ಪ್ರೋತ್ಸಾಹ ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ, ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷ ಹರೀಶ್ ವೈ. ಚಂದ್ರಮ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರತ್ನಾಕರ ಪೂಜಾರಿ, ಬಳಂಜ ಸ.ಉ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ರಂಗಸ್ವಾಮಿ ಸಿ ಆರ್., ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಸುಲೋಚನಾ ಕೆ., ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಅಧ್ಯಕ್ಷ ಸುಕೇಶ್ ಪೂಜಾರಿ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷೆ ಚೇತನಾ ವಿ. ಜೈನ್ ಉಪಸ್ಥಿತರಿದ್ದರು.

Exit mobile version