Site icon Suddi Belthangady

ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಸಮಗ್ರ ದ್ವಿತೀಯ ಪ್ರಶಸ್ತಿ

ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಂಗಳೂರು ಘಟಕ ಡಿ. 7ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಆಯೋಜಿಸಿದ ಯುವ ವೈಭವ 2025 ಪ್ರತಿಭೆಗಳ ಸಮ್ಮಿಲನ ಬ್ರಹ್ಮಶ್ರೀ ಗುರುನಾರಾಯಣ ಪಂಥದ ಸಮಾಜ ಬಾಂಧವರ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕ ಭಾಗವಹಿಸಿ ಪ್ರಮೋಷನ್ ವೀಡಿಯೋಸ್ ಸ್ಪರ್ಧೆಯಲ್ಲಿ ಪ್ರಥಮ ಸಮೂಹ ನೃತ್ಯದಲ್ಲಿ ಪ್ರಥಮ, ಭಾಷಣ ಸ್ಪರ್ಧೆ ಪ್ರಥಮ, ಶಿಸ್ತಿನ ತಂಡ ಪ್ರಥಮ, ಚಿತ್ರಕಲೆ ದ್ವಿತೀಯ ಹೀಗೆ ಅತ್ಯುತ್ತಮ ಪ್ರದರ್ಶನದೊಂದಿಗೆ ಸಮಗ್ರ ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ.

ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಸಹಕಾರದೊಂದಿಗೆ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ರವರ ವಿಶೇಷ ಸಹಕಾರದಲ್ಲಿ ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಎಸ್. ಬಾರ್ಯ ನಿರ್ದೇಶನದಲ್ಲಿ ಭಾಗವಹಿಸಿದ ಈ ತಂಡದಲ್ಲಿ ಲೀಲಾವತಿ ಪನಕಜೆ, ಯಶೋಧರ ಮುಂಡಾಜೆ ಬೇಬೀಂದ್ರ, ಶೈಲೇಶ್ ಓಡಿಲ್ನಾಳ, ಜಿತೀಕ್ಷ, ನಿಶ್ಮಿತಾ, ಚಂದನ, ಸುಶ್ಮಿತಾ, ಕೇಶವ ಮುಂಡಾಜೆ, ಪವನ್ ಕುಮಾರ್, ಯತೀಶ್ ಕೋಟ್ಯಾನ್, ದೀಕ್ಷಿತ್ ಪಾರೆಂಕಿ, ಸಾನ್ವಿ, ಸಾನಿಕ, ಅನನ್ಯ, ಆಕಾಶ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Exit mobile version