ಬೆಳ್ತಂಗಡಿ: ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕರ ವಿರುದ್ಧ ಬೆಳ್ತಂಗಡಿ ಪ್ರಖಂಡ ಪುತ್ತೂರು ಜಿಲ್ಲೆ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನ ಸೌಧ ಎದುರು ಡಿ. 9ರಂದು ಪ್ರತಿಭಟನೆ ನಡೆಯಿತು.
ಗೋ ಹತ್ಯೆಯನ್ನು ತಡೆಯಲು ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಕಾನೂನನ್ನು ಸಡಿಲಗೊಳಿಸಿ ಗೋ ಹತ್ಯೆಗೆ ಸಹಕಾರ, ಪ್ರೋತ್ಸಾಹ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನೂತನ ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಪ್ರಸ್ತಾವಿತ ತಿದ್ದುಪಡಿಯು ಸಂವಿಧಾನದ ಅಶಯಕ್ಕೆ ಹಾಗೂ ರಾಜ್ಯದ ಮತ್ತು ಹಿಂದೂ ಸಮಾಜದ ಹಿತಾಸಕ್ತಿಗೆ ವಿರೋಧಿಯಾಗಿರುವುದರಿಂದ ಅದನ್ನು ವಿಧಾನ ಸಭೆಯಲ್ಲಿ ಮಂಡಿಸದಂತೆ ಸರ್ವ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ವಿ. ಹಿಂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ವಿಷ್ಣು ಮರಾಟೆ, ವಿ. ಹಿಂ ಪರಿಷತ್ ಕಾರ್ಯದರ್ಶಿ ನವೀನ್ ನೆರಿಯ, ವಿ. ಹಿಂ ಪರಿಷತ್ ಗೋ ರಕ್ಷಕ್ ಪ್ರಮುಖ್ ಗಣೇಶ್ ಕಳೆಂಜ, ಜಿಲ್ಲೆಯ ಸಹ ಸಾಯೋಜಕ ದಿನೇಶ್ ಚಾರ್ಮಾಡಿ, ಸತೀಶ್ ನೆರಿಯ, ರಮೇಶ್ ಮುಂಡತ್ತೋಡಿ, ನಾಗೇಶ್ ಕಲ್ಮಂಜ, ಸುಧೀರ್ ಚಾರ್ಮಾಡಿ, ಶಶಿರಾಜ್ ಗುರುವಾಯನಕೆರೆ, ಶರತ್ ಶೆಟ್ಟಿ ಸಂಘ ಪರಿವಾರದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾಂಗ್ರೆಸ್ ಸರ್ಕಾರಕ್ಕೆ ದಿಕ್ಕಾರ ಕೂಗಿ, ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

