Site icon Suddi Belthangady

ವಿದ್ಯಾಮಾತಾದಲ್ಲಿ ಟೆರಿಟೋರಿಯಲ್ ಆರ್ಮಿ ಮತ್ತು ದೆಹಲಿ ಪೊಲೀಸ್‌ ನೇಮಕಾತಿ ಪರೀಕ್ಷೆಗಳಿಗೆ ತರಬೇತಿ ಪ್ರಾರಂಭ

ಬೆಳ್ತಂಗಡಿ: ಭಾರತೀಯ ಸೇನಾ ನೇಮಕಾತಿಗಳು ಸೇರಿದಂತೆ ವಿವಿಧ ಸಶಸ್ತ್ರ ಪಡೆಗಳ ನೇಮಕಾತಿಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿ ಹಲವಾರು ಅಭ್ಯರ್ಥಿಗಳು ವಿವಿಧ ರಕ್ಷಣಾ ಪಡೆಗಳು, ಪೊಲೀಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ವಿದ್ಯಾಮಾತಾ ಅಕಾಡೆಮಿಯು ಇದೀಗ ಇತ್ತೀಚೆಗೆ ನಡೆದ ಟೆರಿಟೋರಿಯಲ್ ಆರ್ಮಿಯ(TA) ದೈಹಿಕ ಸದೃಢತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸದ್ಯದಲ್ಲೇ ನಡೆಯಲಿರುವ ಲಿಖಿತ ಪರೀಕ್ಷೆಯನ್ನು ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಹಾಗೂ ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ದೆಹಲಿ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಎದುರಿಸುತ್ತಿರುವ ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾಮಾತಾ ಅಕಾಡೆಮಿಯು ಟ್ರ್ಯಾಶ್ ಕೋರ್ಸ್ ತರಬೇತಿಯನ್ನು ಪ್ರಾರಂಭಿಸಿದೆ.

ಟೆರಿಟೋರಿಯಲ್ ಆರ್ಮಿ ನೇಮಕಾತಿಯ ದೈಹಿಕ ಸದೃಢತೆ ಪರೀಕ್ಷೆಯ ಮೈದಾನ ತರಬೇತಿಯನ್ನು ಸಹ ವಿದ್ಯಾಮಾತಾ ಅಕಾಡೆಮಿಯು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.ಸದ್ರಿ ನೇಮಕಾತಿ ಪರೀಕ್ಷೆಗಳನ್ನು ಎದುರಿಸುತ್ತಿರುವ ಅಭ್ಯರ್ಥಿಗಳು ತರಬೇತಿಯ ಕುರಿತು ಹೆಚ್ಚಿನ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಲು ಸಂಸ್ಥೆಯ ಕಚೇರಿಯನ್ನು/ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ, ಈ ತರಬೇತಿಯ ಉಪಯೋಗವನ್ನು ಪಡೆದುಕೊಳ್ಳಲು ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿಯ ಮೊಬೈಲ್ ಸಂಖ್ಯೆ 9620468869 ಗೆ ಕರೆ ಮಾಡಲು ಪ್ರಕಟಣೆ ತಿಳಿಸಿದೆ.

Exit mobile version