ಬೆಳ್ತಂಗಡಿ: ಜೆಸಿಐ ಮಂಜುಶ್ರೀ ಆಯೋಜಿಸಿದ ಜೆಸಿ ಉತ್ಸವ 2025 ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಲಿಬಾಲ್ ಕ್ರೀಡಾಪಟು ಮೊಗ್ರು ಗ್ರಾಮದ ದಂಡುಗ ರಕ್ಷಿತಾ ಜೆ.ಎಸ್. ಅವರಿಗೆ ಸಾಧನಾಶ್ರೀ ಪ್ರಶಸ್ತಿ ಲಭಿಸಿದೆ.
ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ದಿ.ಜನಾರ್ದನ ಗೌಡ ಮತ್ತು ಶೀಲಾವತಿ ದಂಪತಿಯ ಪುತ್ರಿ.

