Site icon Suddi Belthangady

ಗುರುವಾಯನಕೆರೆಯ ವರೇಣ್ಯಂ ಕಾಂಪ್ಲೆಕ್ಸ್ ನಲ್ಲಿ ವಿಘ್ನೇಶ್ ಹೆಲ್ಮೆಟ್ಸ್, ಎಕ್ಸಸ್ಸರೀಸ್ ಹಾಗೂ ಸ್ಪೇರ್ಸ್ ಮಳಿಗೆ ಶುಭಾರಂಭ

ಗುರುವಾಯನಕೆರೆ: ಹೆಲ್ಮೆಟ್ಸ್, ಎಕ್ಸಸ್ಸರೀಸ್ ಹಾಗೂ ಸ್ಪೇರ್ಸ್ ಮಾರಾಟ ಹಾಗೂ ದ್ವಿಚಕ್ರ ವಾಹನಗಳ ದುರಸ್ಥಿಯ ಸೇವೆಯಲ್ಲಿ ಹೆಸರುವಾಸಿಯಾಗಿರುವ ವಿಘ್ನೇಶ್ ಹೆಲ್ಮೆಟ್ಸ್ & ವಿಘ್ನೇಶ್ ಮೋಟಾರ್ಸ್ ಇದರ ನೂತನ ಸಂಸ್ಥೆ ವಿಘ್ನೇಶ್ ಹೆಲ್ಮೆಟ್ಸ್ ಮಳಿಗೆಯು ಗುರುವಾಯನಕೆರೆಯ ಬಂಟರ ಭವನದ ಹತ್ತಿರ ಇರುವ ವರೇಣ್ಯಂ ಕಾಂಪ್ಲೆಕ್ಸ್ ನಲ್ಲಿ ಡಿ.8ರಂದು ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ವರೇಣ್ಯಂ ಕಾಂಪ್ಲೆಕ್ಸ್ ಮಾಲಕ ಡಾ. ಶ್ರೀನಿವಾಸ ಉಪಾಧ್ಯಾಯ ದೀಪ ಪ್ರಜ್ವಲಿಸಿ, ವಿಶ್ವನಾಥ್ ಪೂಜಾರಿ ಅವರು ಉದ್ಘಾಟಿಸಿದರು.

ಬೆಳ್ತಂಗಡಿಯ ಅಪರ ಸರ್ಕಾರಿ ವಕೀಲ ಮನೋಹರ್ ಕುಮಾರ್ ಎ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಸುಂದರ ಪೂಜಾರಿ, ಗುರುದೇವ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಮೋನಪ್ಪ ಪೂಜಾರಿ, ಪತ್ರಕರ್ತ ದೇವಿಪ್ರಸಾದ್, ಜಯ ಬಂಗೇರ ಪಾಂಡವರಕಲ್ಲು, ವಿನೋದಾ, ಪ್ರಶಾಂತ್ ಕುಮಾರ್ ಎಸ್., ಪ್ರಸನ್ನ ಕುಮಾರ್, ಗಣೇಶ್ ಪ್ರಸಾದ್, ಅಮಿತಾ ಕುಮಾರಿ ಹಾಗೂ ವಿಘ್ನೇಶ್ ಹೆಲ್ಮೆಟ್ಸ್ ಅಂಡ್ ವಿಘ್ನೇಶ್ ಮೋಟಾರ್ಸ್ ಮಳಿಗೆಯ ಬೆಳ್ತಂಗಡಿ ಹಾಗೂ ಮಡಂತ್ಯಾರು ಶಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನೂತನ ಮಳಿಗೆಯಲ್ಲಿ ಎಲ್ಲಾ ಬ್ರ‍್ಯಾಂಡ್‌ನ ಹೆಲ್ಮೆಟ್‌ಗಳು, ಎಕ್ಸ್ಟ್ರಾ ಫಿಟ್ಟಿಂಗ್ ಐಟಂಗಳು, ಅಕ್ಸೆಸ್ಸರೀಸ್, ಜಾಕೆಟ್‌ಗಳು, ಫಾಗ್ ಲ್ಯಾಂಪ್ ಬಲ್ಬ್ ಗಳು, ಮೋಡಿಫಿಕೇಷನ್ ಸೈಲೆನ್ಸೆರ್ ಹಾಗೂ ಎಲ್ಲಾ ರೀತಿಯ ಸ್ಪೇರ್ಸ್ ಐಟಂಗಳು ಮಿತದರದಲ್ಲಿ ಲಭ್ಯವಿದೆ ಎಂದು ಮಾಲಕ ಪ್ರಶಾಂತ್ ಕುಮಾರ್ ಎಸ್. ತಿಳಿಸಿದ್ದಾರೆ.

Exit mobile version