ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಎಸ್.ಎಂ.ವೈ.ಎಂ ಯುವಕರು ವಿಶಿಷ್ಟ ಸಾಧನೆಯನ್ನು ಸಾದಿಸಿ ದಾಖಲೆಯ ಪುಟ ಸೇರಿದ್ದಾರೆ. ಸುಮಾರು 42 ಅಡಿ ಎತ್ತರದ ಈ ನಕ್ಷತ್ರಕ್ಕೆ ಜಿಲ್ಲೆಯ ಅತಿ ಎತ್ತರದ ಕ್ರಿಸ್ಮಸ್ ನಕ್ಷತ್ರ ಎಂಬ ಮಾನ್ಯತೆ ದೊರೆತಿದೆ. ಏಕತೆ, ಪರಿಸರ ಸ್ನೇಹಿ ಅಲಂಕಾರ ಮತ್ತು ಸೌಹಾರ್ಧತೆಯ ಸಂಕೇತವಾಗಿರುವ ಈ ವಿಶಿಷ್ಠ ಸಾಧನೆ ಫಾ. ಶಾಜಿ ಮ್ಯಾಥ್ಯೂ ಮತ್ತು ಫಾ. ಅಲೆಕ್ಸ್ ಜಾನ್ಸನ್ ಅವರ ಮಾರ್ಗದರ್ಶನ ಮತ್ತು ಸಹಕಾರ ಹಾಗೂ ನೆಲ್ಯಾಡಿ ಅಲ್ಫೋನ್ಸ ಚರ್ಚ್ ನ ಎಸ್.ಎಂ.ವೈ.ಎಂ ಯುವಕರ ಕಠಿಣ ಪರಿಶ್ರಮದ ಸಂಕೇತವಾಗಿದೆ. ಪ್ರತಿ ದಿನ ರಾತ್ರಿ ವಿವಿಧ ಕಡೆಗಳಿಂದ ಈ ನಕ್ಷತ್ರವನ್ನು ವೀಕ್ಷಿಸಿ ಆನಂದಿಸಲು ಜನರು ಭೇಟಿ ನೀಡುತ್ತಿದ್ದಾರೆ
ಜಿಲ್ಲೆಯಲ್ಲೇ ಅತಿ ದೊಡ್ಡ ಹಾಗೂ ಎತ್ತರವಿರುವ ಕ್ರಿಸ್ ಮಸ್ ನಕ್ಷತ್ರ:ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ ಎಸ್.ಎಂ.ವೈ.ಎಂ ಯುವಕರಿಂದ ನಿರ್ಮಾಣ

