Site icon Suddi Belthangady

ಮಡಂತ್ಯಾರು: ಶೌರ್ಯ ಘಟಕದ ಸ್ವಯಂ ಸೇವಕರಿಂದ ಶ್ರಮದಾನ

ಬೆಳ್ತಂಗಡಿ: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಶಾಲೆಯ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳ ಚಿಲಿಪಿಲಿ ಆಟದ ಮೈದಾನ ಶ್ರಮದಾನ ಕಾರ್ಯಕ್ರಮಕ್ಕೆ ಮಡಂತ್ಯಾರು ಶೌರ್ಯ ಘಟಕದ ಸ್ವಯಂ ಸೇವಕರು ಹಾಜರಾಗಿ ಅಮೂಲ್ಯ ಸಹಕಾರ ನೀಡಿದರು.

ಶಾಲಾ ಆವರಣದ ಸ್ವಚ್ಛತಾ ಕಾರ್ಯದಲ್ಲಿಯೂ ಅವರು ತೊಡಗಿಸಿಕೊಂಡು ಶ್ಲಾಘನೀಯ ಸೇವೆ ಸಲ್ಲಿಸಿದರು. ಸ್ವಯಂ ಸೇವಕರಾದ ಬಾಲಕೃಷ್ಣ ಹಾರಬೆ, ಭರತ್ ಕುಮಾರ್, ದಯಾನಂದ ಹಚ್ಚಬೆ, ಯೋಗೀಶ್ ಕುಮಾರ್, ದೀಪಕ್ ಹಾರಬೆ, ಸುಜೀತ್ ಕುಮಾರ್, ಪುರುಷೋತ್ತಮ ಪುಂಜಾಲಕಟ್ಟೆ, ಶೋಭಾ, ಬೇಬಿ ವಡ್ಡ, ಶಕುಂತಳಾ, ರಾಜೇಶ್ವರಿ ಮತ್ತು ಸತೀಶ್ ಆಚಾರ್ಯ ಹಾಗೂ ಶಾಲೆಯ ಶಿಕ್ಷಕರು, ಬೋದಕೇತರ ಸಿಬ್ಬಂದಿಗಳು ಮತ್ತು ಎಸ್‌.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು.

Exit mobile version