Site icon Suddi Belthangady

ವೇಣೂರು: ಅಕ್ರಮ ಮದ್ಯ ಮಾರಾಟ-ಪ್ರಕರಣ ದಾಖಲು: ಮದ್ಯ ವಶ

ವೇಣೂರು: ಠಾಣಾ ಪಿ.ಎಸ್‌.ಐ ಅಕ್ಷಯ್‌ ಡವಗಿ ಅವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ದೊರೆದ ಖಚಿತ ಮಾಹಿತಿ ಮೇರೆಗೆ ಡಿ. 7ರಂದು ಬೆಳಿಗ್ಗೆ 11.50 ಗಂಟೆಗೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಸ್ವಸ್ತಿಕ್‌ ನಗರ ಎಂಬಲ್ಲಿ ಮುದ್ದಾಡಿ ರಸ್ತೆಯಲ್ಲಿ ಗೂಡ್ಸ್‌ ಆಟೋ ರಿಕ್ಷಾ ನಂಬ್ರ ಕೆಎ 21.ಬಿ.8434 ನೇಯವರದಲ್ಲಿ ಗುಂಡೂರಿ ಗ್ರಾಮ ಗುಂಪಕಲ್ಲು ನಿವಾಸಿ ಸುಂದರ( 50ವ) ಎಂಬವರು ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಯಾವುದೇ ಪರವಾನಿಗೆ ಇಲ್ಲದೆ 90 ಎಮ್‌ ಎಲ್‌ Mysore Lancer Whicky -29 ಸ್ಯಾಚೆಟ್‌ ಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ, ಸ್ವಾಧೀನ ಪಡಿಸಿ ಒಟ್ಟು 2.610 ಲೀಟರ್‌ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version