Site icon Suddi Belthangady

ಡಾ.ಸುಬ್ರಹ್ಮಣ್ಯ ಭಟ್ ಅವರ ಐತಿಹಾಸಿಕ ಕಾದಂಬರಿ “ಪ್ರತಿಷ್ಠೆ” ಬಿಡುಗಡೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಭಟ್ ಅವರು ಬರೆದ ಐತಿಹಾಸಿಕ ಕಾದಂಬರಿ “ಪ್ರತಿಷ್ಠೆ” ಯನ್ನು ಡಿ. 7ರಂದು ವೇಣೂರಿನ  ತಿಮ್ಮಣ್ಣರಸರಾದ ಡಾ. ಪದ್ಮ ಪ್ರಸಾದ್ ಅಜಿಲರು ಅಳದಂಗಡಿಯ ಅರಮನೆ ಚಾವಡಿಯಲ್ಲಿ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಕಾದಂಬರಿ ಕೃತಿಕಾರ ಡಾ.ಸುಬ್ರಹ್ಮಣ್ಯ ಭಟ್ಟರು ಅವರ  ಮಕ್ಕಳಾದ ಅಭಿಗಮ್ಯ ರಾಮ್, ಆಶ್ಮನ್ ಕೃಷ್ಣ, ಹಿರಿಯ ವಕೀಲರೂ, ಜ್ಯೋತಿಷಿಗಳಾದ ಗಟ್ಟಿಗಾರು ಗೋಪಾಲಕೃಷ್ಣ ಭಟ್ ಮತ್ತು ನಿವೃತ್ತ ಮುಖ್ಯೋಪಾಧ್ಯಾಯಿನಿ ಬಿ.ಕೆ. ಶೈಲಾರವರು ಹಾಗೂ ಇರ್ವತ್ತೂರು ಮಾಗಣೆಯ ಪ್ರಮುಖರು ಉಪಸ್ಥಿತರಿದ್ದರು.

ಶ್ರವಣ ಬೆಳಗೊಳ, ಕಾರ್ಕಳ ಹಾಗೂ ವೇಣೂರಿನ ಬಾಹುಬಲಿ ಸ್ವಾಮಿಯ ವಿಗ್ರಹ ಪ್ರತಿಷ್ಠೆಯ ಐತಿಹಾಸಿಕ ಕಥೆಯನ್ನು ಒಳಗೊಂಡ ಈ ಕಾದಂಬರಿಗೆ ಬೆಳ್ತಂಗಡಿ ತಾಲೂಕಿನ ಹಿರಿಯ ಸಾಹಿತಿ ಶ್ರೀ ಪ.ರಾಮಕೃಷ್ಣ ಶಾಸ್ತ್ರಿಯವರು ಮುನ್ನುಡಿ ಬರೆದಿರುತ್ತಾರೆ.

ಪ್ರಸ್ತುತ ಕಾದಂಬರಿಯನ್ನು ಮೈಸೂರಿನ ಅಂಬಾರಿ ಪ್ರಕಾಶನದವರು ಪ್ರಕಟಿಸಿದ್ದು ಪ್ರತಿಗಳಿಗಾಗಿ ಲೇಖಕರನ್ನು (9448951856) ಸಂಪರ್ಕಿಸಬಹುದಾಗಿದೆ.

Exit mobile version