ಬೆಳ್ತಂಗಡಿ: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ, ಯುವ ಬಿಲ್ಲವ ವೇದಿಕೆ ಮತ್ತು ಬಿಲ್ಲವ ಮಹಿಳಾ ವೇದಿಕೆ ಸಹಕಾರದೊಂದಿಗೆ 12ನೇ ವರ್ಷದ ಕೋಟಿ-ಚೆನ್ನಯ
ಕ್ರೀಡಾಕೂಟ ಡಿ.7ರಂದು ರಂದು ಬೆಳ್ತಂಗಡಿ ಜೂನಿಯರ್ ಕಾಲೇಜು ಮೈದಾನದ ದಿ.ಕೆ.ವಸಂತ ಬಂಗೇರ ಸಭಾ ವೇದಿಕೆಯಲ್ಲಿ ಕ್ರೀಡಾಕೂಟದ ಉದ್ಘಾಟನೆ ನಡೆಯಿತು. ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ ಕಲ್ಲಾಪು ಅಧ್ಯಕ್ಷತೆ ವಹಿಸಿದ್ದರು.
ಬೆಳಿಗ್ಗೆ ಸಂಘದಲ್ಲಿ ಗುರುಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕ ಅಧ್ಯಕ್ಷೆ ಸುಜಿತಾ ವಿ. ಬಂಗೇರ ಕ್ರೀಡಾ ಜ್ಯೋತಿಯನ್ನು ಭಾರತ ಮಹಿಳಾ ಕಬಡ್ಡಿ ತಂಡದ ಧನಲಕ್ಷ್ಮೀ ಪೂಜಾರಿ, ರಾಷ್ಟೀಯ ವಾಲಿಬಾಲ್ ತಂಡ ಶಿಶಿರ್ ಜಯವಿಕ್ರಮ್, ತೇಜಸ್ವಿನಿ ಅವರಿಗೆ ಹಸ್ತಾಂತರ ಮಾಡಿದರು.
ಬಳಿಕ ಕ್ರೀಡಾ ವಾಹನ ಜಾಥಾಕ್ಕೆ ಮಾಜಿ ಅಧ್ಯಕ್ಷ, ನಿವೃತ್ತ ಎಸ್. ಪಿ. ಪೀತಾಂಬರ ಹೇರಾಜೆ ಚಾಲನೆ ನೀಡಿದರು. ಬಳಿಕ
ಕ್ರೀಡಾಂಗಣಕ್ಕೆ ಸಾಗಿತು. ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಧ್ವಜಾರೋಹಣ ನೆರವೇರಿಸಿದರು.
ನಂತರ ಕ್ರೀಡಾಕೂಟ ಉದ್ಘಾಟನೆಯನ್ನು ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ ದೀಪ ಬೆಳಗಿಸಿ ನೆರವೇರಿಸಿ ದರು. ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಡಿ.ಸುವರ್ಣ,, ದ. ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ. ಬಿ., ಹಿರಿಯ ವಾಹನ ನೀರಿಕ್ಷಕ ಚರಣ್ ಕೆ., ಅಪರ ಸರಕಾರಿ ವಕೀಲ ಮನೋಹರ ಇಳಂತಿಲ, ಉದ್ಯಮಿ ಗೆಜ್ಜೆಗಿರಿ ಯಕ್ಷಗಾನ ಮಂಡಳಿ ತಾಲೂಕು ಸಂಚಾಲಕ ನಿತ್ಯಾನಂದ ನಾವರ, ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದ ಮೋಕ್ತೆಸರ ಯೋಗೀಶ್ ಕಡ್ತಿಲ, ಯುವವಾಹಿನಿ ಮಾಜಿ ಅಧ್ಯಕ್ಷ ಸದಾನಂದ ಉಂಗಿಲ ಬೈಲು, ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, , ಜತೆ ಕಾರ್ಯದರ್ಶಿ ಸಂತೋಷ ಉಪ್ಪಾರು, ಕ್ರೀಡಾ ನಿರ್ದೇಶಕ ತರುಷ್ ಜೆ. ಹೇರಾಜೆ, ಕ್ರೀಡಾ ಕಾರ್ಯದರ್ಶಿ ದೇವಿ ಪ್ರಸಾದ್ ಬರಮೇಲು, ಧಾರ್ಮಿಕ ಪರಿಷತ್ ಸದಸ್ಯ ಮಾಜಿ ಅಧ್ಯಕ್ಷ ಯೋಗೀಶ್ ಕುಮಾರ್ ಕೆ. ಎಸ್. ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಸುಮತಿ ಪ್ರಮೋದ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಎಂ. ಕೆ. ಪ್ರಸಾದ್, ಸಂಘದ ನಿರ್ದೇಶಕರು, ವಿವಿಧ ಗ್ರಾಮ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಗುರುದೇವ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಾಷ್ಟೀಯ ಕಬಡ್ಡಿ ತಂಡದ ಧನಲಕ್ಷ್ಮೀ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಮಹಿಳಾ ಬಿಲ್ಲವ ವೇದಿಕೆಯಿಂದ ವಧು ವರರ ಅನ್ವೇಷಣೆ ನಡೆಯಿತು. ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಹೆಚ್. ಕುಕ್ಕೇಡಿ ಸ್ವಾಗತಿಸಿದರು. ಸತೀಶ್ ಹೊಸ್ಮಾರು ನಿರೂಪಿಸಿದರು.

