




ಉಜಿರೆ: ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಡಿ.6ರಂದು ಕಿಂಡರ್ಗಾರ್ಟನ್, ಒಂದನೇ ಹಾಗೂ ಎರಡನೇ ತರಗತಿ ಶಿಕ್ಷಕಿಯರಿಗೆ “ಬಾಲ್ಯದ ಆರೈಕೆ, ಶಿಕ್ಷಣ ಮತ್ತು ಸಕ್ರಿಯ ಕಲಿಕೆ” ಎಂಬ ವಿಷಯದ ಕುರಿತು ಕಾರ್ಯಗಾರವನ್ನು ಆಯೋಜಿಸಲಾಗಿತ್ತು.


ಸಂಪನ್ಮೂಲ ವ್ಯಕ್ತಿಯಾಗಿ ಮೈಸೂರಿನ ಪ್ರಗತಿ ಇಂಟರ್ ನಾಷನಲ್ ಅಕಾಡೆಮಿಯ ನಿರ್ದೇಶಕ ಸಿವ ಕುಮಾರ್ ಎನ್. ವಿ ವಿಷಯದ ಕುರಿತಾಗಿ ಮಾಹಿತಿ ಹಂಚಿಕೊಂಡರು. ಮಂಗಳೂರಿನ ಆಕ್ಸ್ಫರ್ಡ್ ವಲಯ ವ್ಯವಸ್ಥಾಪಕ ಸುಜಿತ್ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಮನಮೋಹನ್ ನಾಯ್ಕ್ ಕೆ.ಜಿ. ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸ್ಮೃತಿ ಜೈನ್ ನಿರೂಪಿಸಿದರು.









