ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮದ ಎಳನೀರು ನಿವಾಸಿ ವಿಧೂಷ ಜೈನ್ ಅವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 17ರ ಒಳಗಿನ ವಯೋಮಾನದ ಬಾಲಕಿಯರ ವೇಗದ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅವರು ಕಳಸದ ಜಗದೀಶ್ವರ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿಧ್ಯಾರ್ಥಿನಿಯಾಗಿದ್ದು, ಎಳನೀರಿನ ವೈ. ಕೆ. ಸತ್ಯೇಂದ್ರ ಹಾಗೂ ವೀಣಾ ದಂಪತಿಯ ಪುತ್ರಿ.
ಬಾಲಕಿಯರ ವೇಗದ ನಡಿಗೆ ಸ್ಪರ್ಧೆ: ವಿಧೂಷ ಜೈನ್ ಎಳನೀರು ರಾಷ್ಟ್ರಮಟ್ಟಕ್ಕೆ

