Site icon Suddi Belthangady

ಕಡಬ: ಕಿರಣ್ ಮಹಿಳಾ ತಾಲೂಕು ಒಕ್ಕೂಟದ ಮಹಾಸಭೆ ಹಾಗೂ ತರಬೇತಿ

ಬೆಳ್ತಂಗಡಿ:ಮಿಸೇರಿಯೋರ್ ಪ್ರಾಯೋಜಕತ್ವದಲ್ಲಿ ಕ್ರಾಸ್ ಸಂಸ್ಥೆ ಬೆಂಗಳೂರು ನೇತೃತ್ವದಲ್ಲಿ ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ಸಹಕಾರದಿಂದ ನಡೆಸುತ್ತಿರುವ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿರುವ ಕಡಬ ಕಿರಣ್ ಮಹಿಳಾ ತಾಲೂಕು ಒಕ್ಕೂಟದ ಮಹಾಸಭೆ ಮತ್ತು ತರಬೇತಿಯನ್ನು ಕುಟ್ರುಪ್ಪಾಡಿ ಸೈಂಟ್ ಮೇರಿಸ್ ಚರ್ಚ್ ಯಲ್ಲಿ ಡಿ. 5ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣ್ ಮಹಿಳಾ ಒಕ್ಕೂಟದ ಅಧ್ಯಕ್ಷೆ ಡೈಸಿ ಜೋಯ್ ವಹಿಸಿದ್ದರು. ಹಿಂದಿನ ಸಭೆಯ ವರದಿ, ಪ್ರಸ್ತುತ ವರ್ಷದಲ್ಲಿ ನಡೆಸಿದ ಕೆಲಸ ಕಾರ್ಯಗಳ ವರದಿಯನ್ನು ಕಿರಣ್ ಮಹಿಳಾ ಒಕ್ಕೂಟದ ಕಾರ್ಯದರ್ಶಿ ವಲ್ಸಮ್ಮ ಎ.ಜೆ ಮಂಡಿಸಿದರು.

2024-2025ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಕಿರಣ್ ಒಕ್ಕೂಟದ ಖಜಾಂಚಿ ಸೂಸಮ್ಮ ಮಂಡಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಕಡಬ ತಾಲೂಕು ಪಂಚಾಯತ್ ಕಾರ್ಯಕ್ರಮ ಸಂಯೋಜನಾಧಿಕಾರಿ ಜಗತ್ ಅವರು ತಾಲೂಕು ಪಂಚಾಯತ್ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ, ಸಂಜೀವಿನಿ ಒಕ್ಕೂಟದದಡಿಯಲ್ಲಿರುವ ಎನ್.ಆರ್.ಎಲ್.ಎಂ ಯೋಜನೆಯಲ್ಲಿ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತರಬೇತಿ ನೀಡಿದರು.

ಡಿ.ಕೆ.ಆರ್.ಢಿ.ಎಸ್ ಸಂಸ್ಥೆಯ ನಿರ್ದೇಶಕ ಫಾ.ಬಿನೋಯಿ ಎ.ಜೆ ಅವರು ಒಕ್ಕೂಟದ ಬಲವರ್ಧನೆಗಾಗಿ ಪ್ರತಿಯೊಬ್ಬ ಸದಸ್ಯರು ಜವಾಬ್ದಾರಿಯುತವಾಗಿ ಶ್ರಮಿಸಬೇಕು ಎಂದು ತಿಳಿಸಿದರು. ಕುಟ್ರುಪ್ಪಾಡಿ ಸೈಂಟ್ ಮೇರಿಸ್ ಚರ್ಚ್ ಸಹಾಯಕ ಧರ್ಮಗುರು ಫಾ. ರಾಜು ಎಮ್.ಎಸ್.ಟಿ ಅವರು ಶುಭ ಹಾರೈಸಿದರು.

ನೆಲ್ಯಾಡಿ ಅಮೂಲ್ಯ ಮಹಾಸಂಘದ ಸದಸ್ಯೆ ಉಷಾ ಜೋಯ್ ಎಲ್ಲರನ್ನು ಸ್ವಾಗತಿಸಿದರು. ಭಾಗ್ಯೋದಯ ಮಹಾಸಂಘದ ಸದಸ್ಯರು ಪ್ರಾರ್ಥನೆಯನ್ನು ಹಾಡಿದರು. ಭಾಗ್ಯೋದಯ ಮಹಾಸಂಘದ ಸದಸ್ಯೆ ಪ್ರಿನ್ಸಿ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕುಟ್ರುಪ್ಪಾಡಿ ಜೀವ ಜ್ಯೋತಿ ಮಹಾಸಂಘದ ಸದಸ್ಯೆ ಸೆಲಿನಾ ವಂದಿಸಿದರು.

Exit mobile version