




ವೇಣೂರು: ಪಡ್ಡಂದಡ್ಕ ನಿವಾಸಿ ಕೆ. ಅಬ್ದುಲ್ ರಹಿಮಾನ್ (72ವ.) ಡಿ. 5ರಂದು ಹೃದಯಾಘಾತದಿಂದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.


ಮೃತರು ಪಡ್ಡಂದಡ್ಕ ಜುಮ್ಮಾ ಮಸೀದಿಯ ಪ್ರಭಾರ ಅಧ್ಯಕ್ಷರಾಗಿದ್ದು, ಅಲ್ಲದೆ ಮೂಡಬಿದ್ರಿ ಶ್ರೀ ಮಹಾವೀರ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ನಾಲ್ಕು ಮಂದಿ ಪುತ್ರಿಯರನ್ನು ಅಗಲಿರುತ್ತಾರೆ.









