Site icon Suddi Belthangady

ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ನೂತನ ಶಿಲಾಮಯ ಧ್ವಜಸ್ತಂಭದ ಸ್ಥಾಪನೆ

ಕಲ್ಮಂಜ: ಪಜಿರಡ್ಕ ಸಂಗಮ ಕ್ಷೇತ್ರ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ನೂತನ ಶಿಲಾಮಯ ಧ್ವಜಸ್ತಂಭನೆಯ ಸ್ಥಾಪನೆ ಡಿ. 5ರಂದು ವೇದಮೂರ್ತಿ ನೀಲೇಶ್ವರ ಅಲಂಬಾಡಿ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ಶ್ರೀ ಪ್ರಸಾದ್ ಮುನಿಯಂಗಳರವರ ವಾಸ್ತುಶಿಲ್ಪ ಶಾಸ್ತ್ರದ ಪ್ರಕಾರ ವಿವಿಧ ವೈದಿಕ ಕಾರ್ಯಕ್ರಮಗಳ ಮೂಲಕ ಪ್ರತಿಷ್ಠಾಪನೆ ನಡೆಯಿತು.

ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನ ಜಗದ್ಗುರು ಪೀಠದ ಪೀಠಧೀಶರಾದ ಮಹಾ ಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ ಸ್ವಾಮೀಜಿಯವರು ಭೇಟಿ ನೀಡಿ ಶುಭ ಹಾರೈಸಿದರು.

ಮುಂಚಾನ ಶ್ರೀ ಮಹಾದೇವಿ ಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಿರುವ ನೂತನ ಶಿಲಾಮಯ ಧ್ವಜಸ್ಥಂಭವನ್ನು ಬಜಗೋಳಿಯ ಶಿಲ್ಪಿ ಸುಧಾಕರಡೋಂಗ್ರೆ ಕೆತ್ತಿದ್ದು ಉಜಿರೆಯಿಂದ ಡಿ. 4ರಂದು ಭವ್ಯವಾದ ಮೆರವಣಿಗೆ ಮೂಲಕ ಕ್ಷೇತ್ರಕ್ಕೆ ತರಲಾಗಿತ್ತು.

ಬೆಳಿಗ್ಗೆ ದೇವಸ್ಥಾನದಲ್ಲಿ ಗಣಹೋಮ, ವಿವಿಧ ಪೂಜಾ ವಿಧಿ ವಿಧಾನ ನೆರವೇರಿ, ಮಧ್ಯಾಹ್ನ ಮಹಾ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು. ಜಾತ್ರೋತ್ಸವ ಸಮಿತಿಯ ಗೌರವ ಅಧ್ಯಕ್ಷ ರಕ್ಷಿತ್ ಶಿವರಾಮ್, ಅಧ್ಯಕ್ಷ ಸುನೀಲ್ ಕನ್ಯಾಡಿ, ಸದಸ್ಯರು
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ, ಸದಸ್ಯರು, ಅರ್ಚಕ ರಾಜೇಶ್ ಹೊಳ್ಳ ಮತ್ತು ಅರ್ಚಕ ವೃಂದ, ಊರ ಭಕ್ತ ವೃಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version