ನೇತ್ರಾ ನಗರದಲ್ಲಿ ಯಾತ್ರಾ ಆತಿಥ್ಯ ವಸತಿಗೃಹ ಉದ್ಘಾಟನೆ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿಯ ನೇತ್ರಾನಗರದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಹೊಸದಾಗಿ ನಿರ್ಮಿಸಿರುವ 108 ಕೊಠಡಿಗಳು ಇರುವ ಅಪರ್ಣಾ ಮತ್ತು ಶಿವಕಾಂತ ಗೌಡ, ಮಮತಾ ಮತ್ತು ಶಿವರಾಮ ಗೌಡ ಅವರ ಮಾಲಕತ್ವದ ಯಾತ್ರಾ ಆತಿಥ್ಯ ವಸತಿ ಗೃಹ ಡಿ. 5ರಂದು ಶುಭಾರಂಭಗೊಂಡಿತು.

ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊತ್ತೇಸರ ಶರತ್‌ಕೃಷ್ಣ, ಪಡೆಟ್ನಾಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಗಂಗಾಧರ ಗೌಡ, ಮತ್ತು ಯುವ ಉದ್ಯಮಿ ರಂಜನ್ ಜಿ. ಗೌಡ, ರಾಘವೇಂದ್ರ ಬೈಪಡಿತ್ತಾಯ, ಬ್ಲಾಕ್ ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಗುರುವಾಯನಕೆರೆ ನಿಸರ್ಗ ಕರ್ಟನ್ ನ ಮಾಲಕ ನಾಗೇಶ್ ಕೋಟ್ಯಾನ್, ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

108 ಕೊಠಡಿಗಳು ಇರುವ ಈ ವಸತಿ ಗೃಹದಲ್ಲಿ 70 ಕೊಠಡಿ ಹವಾ ನಿಯಂತ್ರಿತವಾಗಿದ್ದು 38 ಸಾಮಾನ್ಯ ಕೊಠಡಿಯಾಗಿದೆ. ಮಕ್ಕಳಿಗೆ ಬೇಕಾದ ಆಟದ ಮನೆ ಹಾಗೂ ವಿಶ್ರಾಂತಿಗೆ ಸುತ್ತಮುತ್ತಲು ಪರಿಸರ ಸ್ನೇಹಿಯಾಗಿದೆ.

ಸಂಸ್ಥೆಯ ಅಪರ್ಣಾ ಗೌಡ ಮತ್ತು ಶಿವಕಾಂತ ಗೌಡ, ಮಮತಾ ಮತ್ತು ಶಿವರಾಮ ಗೌಡ ಅತಿಥಿ ಗಣ್ಯರನ್ನು ಸ್ವಾಗತಿಸಿ, ಸತ್ಕರಿಸಿದರು. ಆಶಿಷ್ ಎಸ್ ಗೌಡ, ಶೃತ ಎಸ್. ಗೌಡ, ಶ್ರೇಯಸ್ ಎಸ್. ಗೌಡ, ತೇಜಸ್ ಎಸ್. ಗೌಡ ಮತ್ತು ಎಸ್.ಪಿ. ಗ್ರೂಪ್ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here