Site icon Suddi Belthangady

ಅರಸ್‌ಕಟ್ಟೆಯಲ್ಲಿ ಸಮೃದ್ಧಿ ಎಂಟರ್‌ಪ್ರೈಸಸ್ ಫರ್ನಿಚರ್ಸ್ & ಹೋಂ ಅಪ್ರೈಯನ್ಸಸ್ ಶುಭಾರಂಭ

ಕುತ್ಲೂರು: ಎಂಟರ್‌ಪ್ರೈಸಸ್ ಫರ್ನಿಚರ್ಸ್ & ಹೋಂ ಅಪ್ರೈಯನ್ಸಸ್ ವಸ್ತುಗಳ ಬೃಹತ್ ಸಂಗ್ರಹವುಳ್ಳ ನೂತನ ಸಮೃದ್ಧಿ ಎಂಟರ್‌ಪ್ರೈಸಸ್ ಮಳಿಗೆಯು ಅರಸ್‌ಕಟ್ಟೆ ಮುಖ್ಯರಸ್ತೆಯಲ್ಲಿರುವ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ ಡಿ.5ರಂದು ಶುಭಾರಂಭಗೊಂಡಿತು.

ಅಳಿಷ ಮತ್ತು ಅತಿಥಿ ಗಣ್ಯರು ಹಾಗೂ ಕುಟುಂಬಸ್ಥರು ನೂತನ ಮಳಿಗೆಯನ್ನು ಉದ್ಘಾಟಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮಾ ಜೈನ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸುಧಾಕರ ಬಂಡಾರಿ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಯಶೋದಾ, ನಾರಾವಿ ಗಣೇಶ್ ಮೆಡಿಕಲ್ ಮಾಲಕ ರವಿ, ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಶಶಿಕಾಂತ್ ಜೈನ್, ಕುತ್ಲೂರು ಕೊಡಮಣಿತ್ಯಾಯ ದೈವಸ್ಥಾನ ಸಮಿತಿ ಅಧ್ಯಕ್ಷ ಪ್ರಭಾಕರ್, ವಸಂತ ನಾರಾವಿ, ಮಹಾವೀರ್ ಜೈನ ಪಂಚಮಿ ಡಿಜಿಟಲ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ ಅಂಡಿಂಜೆ, ಅನ್ವರ್ ನಾರಾವಿ, ದೇಜಪ್ಪ ಟೈಲರ್ ಶಿರ್ಲಾಲು, ನಾರಾವಿ ಸಮಾಜ ಸೇವಕ ಸದಾಶಿವ ಹೆಗ್ಡೆ, ಸುದ್ದಿಬಿಡುಗಡೆ ವರದಿಗಾರ ವನೀಶ್ ಮರೋಡಿ, ಕೃಷಿಕ ದೇಜಪ್ಪ ನಾಯ್ಕ್, ಶ್ರೀ ಸಾಯಿ ಸೌಂಡ್ಸ್ & ಎರೇಂಜರ್ಸ್ ಮಾಲಕ ಸದಾಶಿವ ಪೆರ್ವಾರು ಹಾಗೂ ಅತಿಥಿ ಗಣ್ಯರು ಉಪಸ್ಥಿತರಿದ್ದರು.

ನೂತನ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಎಲ್ಲಾ ಕಂಪೆನಿಯ ಟಿ.ವಿ., ಫ್ರಿಡ್ಜ್, ಏರ್ ಕಂಡೀಷನರ್, ವಾಷಿಂಗ್ ಮೆಷಿನ್, ಮಿಕ್ಸರ್ ಗ್ರೈಂಡರ್, ಸ್ಟೆಬಿಲೈಸರ್, ಫ್ಯಾನ್ ಲಭ್ಯವಿದ್ದು ಎಲ್ಲಾ ರೀತಿಯ ಎಲೆಕ್ಟ್ರಾನಿಕ್ಸ್ ವಸ್ತುಗಳು ಮಿತದರದಲ್ಲಿ ದೊರೆಯುತ್ತದೆ ಎಂದು ಮಾಲಕರಾದ ಕಲಿಮ್ ಮತ್ತು ಜಯಂತ್ ಹೆಗ್ಡೆ ಕಂಚಿಂಜ ಅವರು ತಿಳಿಸಿದರು.

Exit mobile version