Site icon Suddi Belthangady

ನಡ: ಸ.ಪ.ಪೂ. ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ

ನಡ: “ಕಾಲೇಜಿನಲ್ಲಿ ಆಯೋಜಿಸಲಾದ ಎಲ್ಲಾ ಚಟುವಟಿಕೆಗಳಲ್ಲೂ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಈಗ ಬಹುಮಾನವನ್ನು ಪಡೆಯುವ ಸಂಭ್ರಮ” ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನಿವೃತ್ತ ಪ್ರಾಂಶುಪಾಲ ಚಂದ್ರ ಶೇಖರ್ ನುಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮುರಳಿ ಬಲಿಪ ಅವರು ಪಾಲ್ಗೊಂಡು “ಎಲ್ಲಾ ಹಕ್ಕಿಗಳಿಗೂ ಆಹಾರ ಭಗವಂತ ಸೃಷ್ಟಿಸಿದ್ದಾನೆ ಆದರೆ ಅವು ಹುಡುಕಿಕೊಂಡು ಹೋಗಬೇಕು ಪ್ರಯತ್ನ ಬೇಕು.”ಎಂದು ಕರೆ ನೀಡಿದರು. ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಭಾಕರ ಮಯ್ಯ, ಅಜಿತ್ ಆರಿಗ, ಮುನಿರಾಜ ಅಜ್ರಿ, ಮೋಹನ ಗೌಡ, ಕುಮಾರ ಭವಿತ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಸಂತಿ ಪಿ. ವರದಿ ವಾಚಿಸಿದರು. ಕಳೆದ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಎಂಟು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದರ ನಿರ್ವಹಣೆಯನ್ನು ಶಿಲ್ಪಾಡಿ ನಿರ್ವಹಿಸಿದರು. ಕ್ರೀಡಾ ಸಾಧಕರಿಗೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಕ್ರೀಡಾ ಪ್ರೇಮಿ ಹಾಗೂ ತರಬೇತುದಾರ ಅಜಿತ್ ಅವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲೆ ಲಿಲ್ಲಿ ಪಿ.ವಿ. ಸ್ವಾಗತಿಸಿ, ಪವಿತ್ರ ಮತ್ತು ಸುಕನ್ಯ ಕಾರ್ಯಕ್ರಮ ನಿರೂಪಿಸಿದರು. ಸವಿತಾ ವಂದಿಸಿದರು.

Exit mobile version