ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿಯ ನೇತ್ರಾನಗರದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಹೊಸದಾಗಿ ನಿರ್ಮಿಸಿರುವ 108 ಕೊಠಡಿಗಳು ಇರುವ ಅಪರ್ಣಾ ಮತ್ತು ಶಿವಕಾಂತ ಗೌಡ, ಮಮತಾ ಮತ್ತು ಶಿವರಾಮ ಗೌಡ ಅವರ ಮಾಲಕತ್ವದ ಯಾತ್ರಾ ಆತಿಥ್ಯ ವಸತಿ ಗೃಹ ಡಿ. 5ರಂದು ಶುಭಾರಂಭಗೊಳ್ಳಲಿದೆ.
ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊತ್ತೇಸರ ಶರತ್‌ಕೃಷ್ಣ, ಪಡೆಟ್ನಾಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ ಗಂಗಾಧರ ಗೌಡ, ವಿಧಾನಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ಶಾಸಕ ಹರೀಶ್ ಪೂಂಜ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಮಂಗಳೂರು ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಕೆ.ಹರೀಶ್ ಕುಮಾರ್ ಮತ್ತು ಯುವ ಉದ್ಯಮಿ ರಂಜನ್ ಜಿ. ಗೌಡ ಭಾಗವಹಿಸಲಿದ್ದಾರೆ. 108 ಕೊಠಡಿಗಳು ಇರುವ ಈ ವಸತಿ ಗೃಹದಲ್ಲಿ 70 ಕೊಠಡಿ ಹವಾ ನಿಯಂತ್ರಿತವಾಗಿದ್ದು 38 ಸಾಮಾನ್ಯ ಕೊಠಡಿಯಾಗಿದೆ. ಮಕ್ಕಳಿಗೆ ಬೇಕಾದ ಆಟದ ಮನೆ ಹಾಗೂ ವಿಶ್ರಾಂತಿಗೆ ಸುತ್ತಮುತ್ತಲು ಪರಿಸರ ಸ್ನೇಹಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

