ಕೊಕ್ಕಡ: ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ ಅವರು ಕೊಕ್ಕಡದ ಸೌರಡ್ಕದಲ್ಲಿರುವ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರೊಂದಿಗೆ ಮಾತುಕತೆ ನಡೆಸಿದರು. ಇದೊಂದು ಆಕಸ್ಮಿಕ, ಸೌಹಾರ್ದ ಭೇಟಿಯಾಗಿತ್ತು.
ದೇಗುಲಕ್ಕೆ ಕರೆದುಕೊಂಡು ಹೋದ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಡಾ. ಯು.ಪಿ. ಶಿವಾನಂದ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು. ನಿಮ್ಮ ಸಾಧನೆ ಮತ್ತು ಹೋರಾಟದ ಹಾದಿ ಸ್ಫೂರ್ತಿಯುತವಾದುದು ಎಂದು ಶಬರಾಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಸುದ್ದಿ ಬಿಡುಗಡೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವ ಶರ್ಮ ನಿಡ್ಲೆ, ವರದಿಗಾರ ರೂಪೇಶ್ ಶಿಬಾಜೆ, ಸುದ್ದಿ ಸಿಬ್ಬಂದಿ ಕುಶಾಲಪ್ಪ ಉಪಸ್ಥಿತರಿದ್ದರು.

