Site icon Suddi Belthangady

ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜ ಸ್ತಂಭದ ಶೋಭಾ ಯಾತ್ರೆಗೆ ಉಜಿರೆಯಲ್ಲಿ ಚಾಲನೆ

ಕಲ್ಮಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು ಬೆಳ್ತಂಗಡಿ ಮಾರ್ಗವಾಗಿ ಉಜಿರೆಗೆ ತಲುಪಿದೆ.

ಉಜಿರೆಯಲ್ಲಿ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಉಜಿರೆಯಲ್ಲಿ ಚಾಲನೆ ನೀಡಿದರು. ಕೆ.ಪಿ.ಸಿ.ಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬ್ಲಾಕ್ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ನಾಗೇಶ್ ಗೌಡ, ಉಜಿರೆ ಮಹಾವೀರ ಏಜೆನ್ಸಿ ಮಾಲಕ ಪ್ರಭಾಕರ್ ಜೈನ್, ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ, ಉಜಿರೆ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ, ಉದ್ಯಮಿ ಮೋಹನ್ ಶೆಟ್ಟಿಗಾರ, ಬೆಳಾಲು ಗ್ರಾ. ಪಂ. ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನೀಲ್ ಕನ್ಯಾಡಿ, ತುಕಾರಾಮ್ ಸಾಲಿಯಾನ್, ರವಿ ಭಟ್ ಕಲ್ಮಂಜ ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.

ಚಾಲನೆ ನೀಡಿ ಭವ್ಯ ಶೋಭಾ ಯಾತ್ರೆಯೊಂದಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ತಲುಪಿ ಮುಂಡ್ರುಪ್ಪಾಡಿ ಮಾರ್ಗವಾಗಿ ಶ್ರೀ ಕ್ಷೇತ್ರಕ್ಕೆ ತಲುಪಲಿದೆ.

Exit mobile version