Site icon Suddi Belthangady

ಕನ್ಯಾಡಿ: ದೀಪಶ್ರೀ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ: ತಾಲೂಕು ಧರ್ಮಸ್ಥಳ ವಲಯದ ಕನ್ಯಾಡಿ ಕಾರ್ಯಕ್ಷೇತ್ರದಲ್ಲಿ ದೀಪಶ್ರೀ ಜ್ಞಾನ ವಿಕಾಸ ಕೇಂದ್ರದ ಉದ್ಘಾಟನಾ ಸಮಾರಂಭವನ್ನು ಕನ್ಯಾಡಿ ಹರಿಹರ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಜ್ಞಾನ ವಿಕಾಸ ಕಾರ್ಯಕ್ರಮದ ನಿರ್ದೇಶಕ ವಿಠಲ ಪೂಜಾರಿರವರು ಹಿಂದಿನ ಕಾಲದಲ್ಲಿ ಯಾವ ರೀತಿ ಬಡತನ ಇತ್ತು. ಸಂಸ್ಕಾರ, ಸಂಪ್ರದಾಯ, ಆಚಾರ ವಿಚಾರಗಲಿತ್ತು. ಈಗ ಅದೆಲ್ಲವೂ ಮರೆ ಮಾಚಿದೆ. ಮುಂದಿನ ದಿನಗಳ ಬಗ್ಗೆ ನಮಗೆಲ್ಲ ಭಯವಿದೆ. ಹಿಂದಿನ ಕಾಲದ ಸಂಸ್ಕಾರಗಳನ್ನು ಉಳಿಸಬೇಕಾದರೆ ನಮಗೆ ತಿಳಿದದ್ದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಾಗಿದೆ.

ಜ್ಞಾನ ವಿಕಾಸ ಕೇಂದ್ರದಲ್ಲಿ ಜೀವನಕ್ಕೆ ಪೂರಕವಾದ ಹಲವಾರು ಮಾಹಿತಿಗಳನ್ನು ಪಡೆದು ಕುಟುಂಬಕ್ಕೆ ಬೆಳಕನ್ನು ನೀಡಲಿ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟ ಅಧ್ಯಕ್ಷ ರಾದೇಷ್ ರವರು ಒಕ್ಕೂಟದಲ್ಲಿ ಹೊಸ ಜ್ಞಾನ ವಿಕಾಸ ಕೇಂದ್ರಕ್ಲೆ ಅವಕಾಶ ದೊರೆತಿದ್ದು, ಉತ್ತಮ ರೀತಿಯಲ್ಲಿ ಮುಂದುವರಿಸುವಂತೆ ತಿಳಿಸಿದರು. ಕಾರ್ಯಕ್ರಮಲ್ಲಿ ಯೋಜನಾಧಿಕಾರಿ ಯಶೋಧರ್, ಒಕ್ಕೂಟ ಪದಾಧಿಕಾರಿ ಹರಿಣಾಕ್ಷಿ ಉಪಸ್ಥಿತರಿದ್ದರು.

ಸೇವಾಪ್ರತಿನಿಧಿ ಪ್ರಮೀಳಾ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾವಸಂತ್ ನಿರೂಪಿಸಿದರು. ಮೇಲ್ವಿಚಾರಕ ಯಶೋಧರ ಧನ್ಯವಾದವಿತ್ತರು.

Exit mobile version