ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ, ಕುದ್ರಡ್ಕ ಕಾರ್ಯಕ್ಷೇತ್ರದ ಪದ್ಮನಾಭ ಗೌಡರವರು ಪಾಶ್ವವಾಯು ಅನಾರೋಗ್ಯದಿಂದ ಇರುವುದರಿಂದ ನಡೆದಾಡಲು ಅನುಕೂಲ ವಾಗುವಂತೆ ಯು ಸೇಫ್ ವಾಕರ್ ರನ್ನು ವಿತರಣೆ
ಯೋಜನಾಧಿಕಾರಿ ಅಶೋಕರವರು ಮಾತನಾಡಿ ಯೋಜನೆಯ ಜನ ಮಂಗಲ ಕಾರ್ಯಕ್ರಮದಡಿ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಅಶಕ್ತರಿಗೆ ಅನುಕೂಲವಾಗುವಂತೆ ಯೋಜನೆಯಿಂದ ಅನಾರೋಗ್ಯದಿಂದ ಮಲಗಿರುವವರಿಗೆ, ವಾಟರ್ ಬೆಡ್, ಅನಾರೋಗ್ಯದಿಂದ ನಡೆದಾಡಲು ಅಸಾಧ್ಯರಾದವರಿಗೆ ಕುಳಿತಲ್ಲಿಯೇ ಓಡಾಡಲು ಔಟ್ ಸೈಡ್ ವಿಲಚೆರ್, ನಡೆದಾಡಲು ಅಸಾಧ್ಯವಾಗಿರುವ ಶೌಚಾಲಯಕ್ಕೆ ಹೋಗಲು ಮಾತ್ರ ಕಮಾನ ಚೇರ ವಿತ್ ಚೇರ್, ಕಾಲುಗಳಲ್ಲಿ ಸ್ವಲ್ಪ ಬಲವಿದ್ದು ಎರಡು ಕೈ ಗಳಿಂದ ನಡೆದಾಡಲು ಸಾಧ್ಯವಿರುವವರಿಗೆ, ಯು ಶೇಪ್ ವಾಕರ್ ಹಾಗೂ ಸ್ವಲ್ಪಮಟ್ಟಿಗೆ ನಡೆದಾಡಲು ಅಸಕ್ತರಿಗೆ ವಯೋವೃದ್ದರಿಗೆ, ಊರುಗೋಲು ಹಾಗೂ ಕಾಲುಗಳಿಗೆ ಸ್ವಾಧೀನ ಇಲ್ಲದವರಿಗೆ ನಡೆದಾಡಲು ಉಪಕರಣ ಗಳನ್ನು ಯೋಜನೆಯ ಜನಮಂಗಲ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಅನಾರೋಗ್ಯಹಾಗೂ ಆಸಕ್ತರಿಗೆ ವಿತರಿಸಲಾಗುವುದು ಎಂದು ಮಾಹಿತಿ ತಿಳಿಸಿದರು.
ಕುದ್ರಡ್ಕ ಒಕ್ಕೂಟದ ಅಧ್ಯಕ್ಷ ವಿಜಯ ಮಡಕ್ಕಿಲ, ವಲಯದ ಮೇಲ್ವಿಚಾರಕ ಕೇಶವ, ಕೃಷಿ ಮೇಲ್ವಿಚಾರಕ ಕೃಷ್ಣ ಗೌಡ, ಕುದ್ರಡ್ಕ, ಮಚ್ಚಿನ ಸೇವಾಪ್ರತಿನಿಧಿ ನಂದಿನಿ ಹಾಗೂ ಪರಮೇಶ್ವರ್, ಒಕ್ಕೂಟದ ಜೊತೆ ಕಾರ್ಯದರ್ಶಿ ಜಯಂತಿ ಹಾಗೂ ಇತರರು ಉಪಸಿತರಿದ್ದರು

