Site icon Suddi Belthangady

ಚಾರ್ಮಾಡಿ: ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ: ಬಾಲಕ ಮೃತ್ಯು

ಚಾರ್ಮಾಡಿ: ಶಾಲಾ ಬಾಲಕ ಅಂಗಡಿಯಿಂದ ತಿಂಡಿ ತೆಗೆದುಕೊಂಡು ರಸ್ತೆ ದಾಟುತ್ತಿದ್ದವೇಳೆ ಕಾರು ಡಿಕ್ಕಿಯಾಗಿ ಬಾಲಕ ಸಾವನ್ನಪ್ಪಿದ ಘಟನೆ ಡಿ.3ರಂದು ಚಾರ್ಮಾಡಿಯಲ್ಲಿ ನಡೆದಿದೆ.

ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ ಎಂಬವರ ಪುತ್ರ 03 ವರ್ಷ ಪ್ರಾಯದ ಮಹಮ್ಮದ್ ಹಝೀರಿನ್ ಮೃತಪಟ್ಟ ನತದೃಷ್ಟ ಬಾಲಕ ಎಂದು ತಿಳಿದು ಬಂದಿದೆ.

ಬಾಲಕ ಮಹಮ್ಮದ್ ಹಝೀರಿನ್ ತಮ್ಮ ಮನೆಯ ಸಮೀಪ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಇದ್ದ ಅಂಗಡಿಗೆ ತಿಂಡಿ ತರಲೆಂದು ಹೋಗಿ, ತಿಂಡಿ ತೆಗೆದುಕೊಂಡು ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ.

Exit mobile version