Site icon Suddi Belthangady

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ: ಬೆಳ್ತಂಗಡಿಯ ಎಸ್.ಡಿ.ಎಂ ಶಾಲೆಗೆ ಹಲವು ಪ್ರಶಸ್ತಿ

ಬೆಳ್ತಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿಯ ಸಹಭಾಗಿತ್ವದಲ್ಲಿ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿಗಳು ಲಭಿಸಿವೆ.

11 ಕ್ಲಸ್ಟರ್ ಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ 40 ಕ್ಕೂ ಹೆಚ್ಚಿನ ಸ್ಪರ್ಧೆಗಳ ಪೈಕಿ ಹಲವು ವಿಭಾಗಗಳಲ್ಲಿ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಗೆ ಪ್ರಶಸ್ತಿಗಳು ಸಂದಿವೆ. ಈ ಮೂಲಕ 13 ವಿದ್ಯಾರ್ಥಿಗಳು ಡಿಸೆಂಬರ್ 18 ರಂದು ಮೂಡುಬಿದಿರೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

ಯಶ್ವಿತ್, ಕಿರಿಯ ಪ್ರಾಥಮಿಕ ವಿಭಾಗ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ‌, ಎಂ ರೀತಿಕಾ ಶೆಣೈ ಪ್ರೌಢಶಾಲಾ ವಿಭಾಗ ಹಿಂದಿ ಭಾಷಣ ಪ್ರಥಮ ಸ್ಥಾನ, ಜಾನಪದ ನೃತ್ಯ ಸಮೂಹ ನೃತ್ಯ ಸ್ಪರ್ಧೆ ಪ್ರೌಢಶಾಲಾ ವಿಭಾಗ ಪೂರ್ವಿ, ಪ್ರಾಪ್ತಿ, ಶ್ರೀರಕ್ಷಾ, ರಿಧು, ಸಂಜನಾ, ತೇಜಸ್ ಬಳಗ ಪ್ರಥಮ ಸ್ಥಾನ, ಪ್ರೌಢಶಾಲಾ ವಿಭಾಗದ ಕವಾಲಿ ಸ್ಪರ್ಧೆಯಲ್ಲಿ ಅನಘ, ಬಿ ಸಹನಾ ಆಚಾರ್ಯ, ರಿಷಿತ, ಶ್ರೀವಿನೀತ್ ಎಮ್, ನಿಧೀಶ, ಶ್ರೇಯಸ್ ಬಳಗ ಪ್ರಥಮ ಸ್ಥಾನ ಪಡೆದುಕೊಂಡಿರುತ್ತಾರೆ.

ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಲಿದ್ದಾರೆ. ಅವರಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗು ಶಾಲೆಯ ಶಿಕ್ಷಕರ ವೃಂದ ಮತ್ತು ವಿದ್ಯಾರ್ಥಿ ಸಮೂಹ ಅಭಿನಂದಿಸಿರುತ್ತಾರೆ.

Exit mobile version