ಬೆಳ್ತಂಗಡಿ: ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ, ಸಂಸ್ಥೆಯ ವಿದ್ಯಾರ್ಥಿಗಳು ಅಕ್ಟೋಬರ್ 2025ರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ (RGUHS )ವಿಶ್ವವಿದ್ಯಾಲಯದ II, IV, VI ಮತ್ತು VIII ಸೆಮಿಸ್ಟರ್ ಪರೀಕ್ಷೆಗಳಲ್ಲಿ ಶ್ಲಾಘನೀಯ ಸಾಧನೆ ಮಾಡಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇದರಲ್ಲಿ ವಿಶೇಷವಾಗಿ VIII ಸೆಮಿಸ್ಟರ್ ವಿದ್ಯಾರ್ಥಿಗಳು – ಕಾಲೇಜಿನ ಮೊದಲ ಔಟ್‌ಗೋಯಿಂಗ್ ಬ್ಯಾಚ್ — ಅತ್ಯುತ್ತಮ ಫಲಿತಾಂಶ ದಾಖಲಿಸಿರುವುದು ಪ್ರಶಂಸನೀಯ.
ಎರಡನೇ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಅಂಜಲಿ (91.7%),ತೃಪ್ತಿ(88.6% ), ಕೀರ್ತಿ (86.2%), ಮತ್ತು ನಾಲ್ಕನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಶರಣ್ಯಾ ಎಸ್ (85%), ಪ್ರಿಯಾ (84.3%), ಖತೀಜತುಲ್ ಮುನ್ಹಾಝ (82.1%), ಆರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಅಮೃತಾ ಕೆ (84.7%), ಸುಶ್ಮಿತಾ (84.7%), ಜಯಶ್ರೀ ಬಿ (82.7%), ಚಂದನಾ ಎಸ್ (82%), ಎಂಟನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಖತೀಜತುಲ್ ಮೌಸೀರ (85.5%), ಕೇಶಿನಿ (84.5%), ದಿಯಾ ಅನ್ಝಿಟ (83.6%), ಫಾತಿಮಾ ತಫೀಮಾ (83.6%) ಅಂಕಗಳನ್ನು ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಎರಡನೇ ಸೆಮಿಸ್ಟರ್ ನ ವಿದ್ಯಾರ್ಥಿಗಳಾದ ಫಾತಿಮತುಲ್ ಮಿಸ್ರಿಯಾ (85.5%), ನಿಹಾಲಾ (81.7%), ಪವಿತ್ರಾ ಸಂಗಪ್ಪ (81.4%), ಭಾಗ್ಯಶ್ರೀ (80.3%), ಮಾಜಿದಾ (80%), ಸ್ಮಿತನ್ ಬಿ.ಆರ್ (79%), ಕಾರುಣ್ಯಶ್ರೀ (78.6%), ನಿಶ್ಮಿತಾ (78.3%), ಕೀರ್ತನಾ (76.9%), ನಫೀಸತ್ ಸಜಿಧ (76.6%), ಭಾರ್ಗವ್ ಶಂಕರ ನಾಯಕ್ (76.2%), ಝೈನಬಾ ಝೈಮಾ (75.5%), ನಾಲ್ಕನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ರೂಪೇಶ್ (80%), ಸಯ್ಯದ್ ಅನ್ವರ್ (78%), ವಿದ್ಯಾ ಎಸ್ (78%), ಫಾತಿಮಾ ಅಶ್ರೀನಾ (77.9%), ಪಾತ್ರ ಶುಮಿತಾ (77.9%), ಚಂದನಾ (75.7%), ಅಬೆಲ್ ಜೋಸೆಫ್ (75%), ಆರನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಜಲಜಾಕ್ಷಿ (81.3%), ಭಾನುನಂದನ್ (80.7%), ಕಿರಣ್ ಎಸ್ (80.7%), ಸಲ್ಮಾ ಬಾನು (79.3%), ಪ್ರತಿಭಾ (79.3%), ಅಮೀನತುಲ್ ರಿಮ್ಶಾ (78.7%), ಫಾತಿಮತ್ ಶಬೀಬಾ (78.7%), ಧನ್ಯಾಶ್ರೀ ಎನ್ (78%), ಮೇಘಾಬಾಯಿ ಪಿ ಎಮ್ (78%), ಶಶಾಂಕ್ ಕೆ (78%), ಆಶಿತಾ (76%), ಆಯೇಶಾ ಝೋಹಾ (75.3%), ಶಾಶ್ವತ್ ಎನ್ ಪಿ (75.3%), ಎಂಟನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಶಿವಯೋಗಿ ಗುರುಪುತ್ರ ಅಲೆನವರ್ (82.7%), ಸಮೀಮ್ (80.9%), ಅಭಿನವ ಕೃಷ್ಣ (80%), ಯಶ್ವಂತ್ ಜಿ ಟಿ (80%), ಕಾರ್ತಿಕ್ ಎಂ (77.3%), ನವೀನ್ ಕುಮಾರ್ (75.5%) ಅವರು ಡಿಸ್ಟಿಂಕ್ಷನ್ ಪಡೆದಿದ್ದಾರೆ.
“ಈ ಮೊದಲ ಔಟ್‌ಗೋಯಿಂಗ್ ಬ್ಯಾಚ್‌ನ ಸಾಧನೆ ನಮ್ಮ ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿ”. ಈ ಶೈಕ್ಷಣಿಕ ಸಾಧನೆಯು ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಹಾಗೂ ಉನ್ನತ ಮಟ್ಟದ ಮಾರ್ಗದರ್ಶನದ ಫಲಿತಾಂಶವಾಗಿದೆ. ಅಧ್ಯಾಪಕರ ನಿಷ್ಠೆ ಮತ್ತು ಕಾಲೇಜಿನ ಶೈಕ್ಷಣಿಕ ವಾತಾವರಣವು ಈ ವಿದ್ಯಾರ್ಥಿಗಳ ಶ್ರೇಷ್ಟ ಫಲಿತಾಂಶಕ್ಕೆ ಸಹಕಾರಿಯಾಗಿದ್ದು, ಇದು ಇತರ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕವಾಗಿದೆ. ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕರು ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಭವಿಷ್ಯ ಇನ್ನೂ ಉಜ್ವಲವಾಗಲೆಂದು ಹಾರೈಸಿದರು.

