ಬೆಳ್ತಂಗಡಿ: ಕುಪ್ಪೆಟ್ಟಿ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ ಮತ್ತು ಸಭಾಭವನ ಉದ್ಘಾಟನೆ ಡಿ.6,7,8ರಂದು ನಡೆಯಲಿದೆ. ರಾಜಗೋಪುರ ಉದ್ಘಾಟನೆಗೆ ಆಗಮಿಸಲಿರುವ ಮೈಸೂರಿನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರಿಗೆ ಮೈಸೂರಿನಲ್ಲಿ ಕಾರ್ಯಕ್ರಮದ ಆಮಂತ್ರ ಪತ್ರಿಕೆ ನೀಡಲಾಯಿತು. ಈ ವೇಳೆ ಮಾತನಾಡಿದ ಯದುವೀರ್ , ನಾನು ಕುಪ್ಪೆಟ್ಟಿಯ ಕಾರ್ಯಕ್ರಮಕ್ಕೆ ಬರುತ್ತಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಬನ್ನಿ ಎಂದು ವೀಡಿಯೋ ಮೂಲ ಆಹ್ವಾನಿಸಿದರು. ಗಣೇಶ ಭಜನಾ ಮಂದಿರದ ಅಧ್ಯಕ್ಷ ರೋಹಿತ್ ಶೆಟ್ಟಿ ಪುಯಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಕುಪ್ಪೆಟ್ಟಿ, ಗಂಗಾಧರ ಗೌಡ, ಯತೀಶ್ ಗೌಡ ಬನಾರಿ ಉಪಸ್ಥಿತರಿದ್ದರು.
ಕುಪ್ಪೆಟ್ಟಿ: ಭಜನಾ ಮಂದಿರದ ರಾಜಗೋಪುರ ಲೋಕಾರ್ಪಣೆಗೆ ಮಹಾರಾಜರಿಗೆ ಆಮಂತ್ರಣ-ನಾನು ಬರುತ್ತೇನೆ ಎಂದ ಯದುವೀರ್

