ಶಿಬಾಜೆ: ಮೊಂಟೆತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಫೆ. 5ಮತ್ತು 6ರಂದು ನಡೆಯಲಿರುವ ಶತ ಚಂಡಿಕಾಯಾಗದ ಪೂರ್ವಭಾವಿ ಸಭೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಜಿರಡ್ಕ ಶ್ರೀಧರ್ ರಾವ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಶತ ಚಂಡಿಕಾಯಾಗ ನಿರ್ವಹಣೆಗೆ ಬೇಕಾಗುವ ಸಮಿತಿಗಳನ್ನು ರಚಿಸಲಾಯಿತು.
ಶತ ಚಂಡಿಕಾಯಾಗ ಸಮಿತಿ ಅಧ್ಯಕ್ಷರಾಗಿ ಜಯಪ್ರಕಾಶ್ ರಾವ್ ಅಜಿರಡ್ಕ, ಕಾರ್ಯಧ್ಯಕ್ಷರಾಗಿ ಗಣೇಶ್ ಗೋಖಲೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಅಜಿರಡ್ಕ ಶ್ರೀಧರ್ ರಾವ್ ಜತೆ ಕಾರ್ಯದರ್ಶಿಯಾಗಿ ಬೂಡುಮುಗೇರು ಪುರುಷೋತ್ತಮ್ ಅಭ್ಯಂಕರ್ ಅವರನ್ನು ಆಯ್ಕೆ ಮಾಡಲಾಯಿತು.
ಶಿಶಿಲ ಸೀಮೆಗೆ ಸಂಬಂಧಪಟ್ಟ ಎಲ್ಲಾ ದೇವಾಲಯಗಳ ಅಧ್ಯಕ್ಷರನ್ನು ಸಮಿತಿಯ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ವರದಶಂಕರ ದಾಮ್ಲೆ ಅವರನ್ನು ಸಮಿತಿಯ ಸಂಚಾಲಕರನ್ನಾಗಿ, ಸಹ ಸಂಚಾಲಕರನ್ನಾಗಿ ಹೆಚ್. ಎಸ್. ಚೆನ್ನಪ್ಪ ಗೌಡ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ವಾಮನ ತಾಮನ್ಕರ್, ಧರ್ಮರಾಜ ಗೌಡ ಅಡ್ಕಾಡಿ, ಸತೀಶ್ ಶೆಟ್ಟಿ ಗುತ್ತು, ಜಯರಾಮ ನೆಲ್ಲಿತ್ತಾಯ, ಸದಾಶಿವನ್ ಟಿ. ಕೆ., ರಾಘವೇಂದ್ರ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರಾದ ಬಾಲಚಂದ್ರ ಶೆಟ್ಟಿಗಾರ್, ಸುಂದರ ಎಂ.ಕೆ., ವಸಂತ ಗೌಡ, ಇ.ವಿ. ಸತೀಶ್, ಗಂಗಾಧರ ಗೌಡ, ಶೀಲಾ ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿಯ ಸದಸ್ಯೆ ಶೋಭಾ ಎಂ. ಅತಿಥಿಗಳನ್ನು ಸ್ವಾಗತಿಸಿ, ದೇವಾಲಯದ ಸಿಬ್ಬಂದಿ ಶಕುಂತಲಾ ಧನ್ಯವಾದವಿತ್ತರು.

