ಮುಂಡಾಜೆ: ಬಂಟರ ಗ್ರಾಮ ಸಮಿತಿ, ಉಜಿರೆ ಬಂಟರ ವಲಯ ಸಮಿತಿ, ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ ಮತ್ತು ಸ್ಪಂದನ ಸೇವಾ ತಂಡ, ಬೆಳ್ತಂಗಡಿ ತಾಲೂಕಿನ ಕೊಡುಗೈ ದಾನಿಗಳ ಸಹಾಯ ಹಸ್ತದೊಂದಿಗೆ ಮುಂಡಾಜೆ ಗ್ರಾಮ ಸಮಿತಿಗೆ ಒಳಪಟ್ಟ ಸೇಸಪ್ಪ ಗುಣವತಿ ಶೆಟ್ಟಿ ಅವರಿಗೆ ಮನೆ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿ, ನ.27ರಂದು ಈ ಮನೆಯ ಗೃಹಪ್ರವೇಶ ನಡೆಯಿತು.
ಮನೆ ಸ್ಲಾಬ್ ನಿರ್ಮಾಣಕ್ಕೆ ಬೇಕಾದ ಸಿಮೆಂಟ್ ಪೂರೈಸಿದ ಗಣ್ಯರಾದ ಉಜಿರೆ ಟಿ.ಬಿ. ಕ್ರಾಸ್ ಆರಾಧನಾ ಹಾರ್ಡ್ ವೇರ್ ಮಾಲಕ ಗಂಗಾಧರ ರೈ ಉಜಿರೆ, ಸ್ಲಾಬ್ ನಿರ್ಮಾಣಕ್ಕೆ ಬೇಕಾದ ಕಬ್ಬಿಣ ಒದಗಿಸಿಕೊಟ್ಟ ಪ್ರಶಾಂತ್ ಶೆಟ್ಟಿ ಮೂಡಯೂರು, ಮನೆಯ ಮುಖ್ಯದ್ವಾರದ ಸಂಪೂರ್ಣ ವ್ಯವಸ್ಥೆ ಮಾಡಿದ ಉಮೇಶ್ ಶೆಟ್ಟಿ ದುರ್ಗಾ ನಿಲಯ ಉಜಿರೆ, ಸ್ಪಂದನ ಸೇವಾ ತಂಡದ ಅಧ್ಯಕ್ಷ ಹಾಗೂ ಬೆಳ್ತಂಗಡಿ ಬಂಟರ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಉಜಿರೆ ವಲಯದ ಅಧ್ಯಕ್ಷೆ ವನಿತಾ ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಕೊಡುಗೈದಾನಿ ಕಂಟ್ರಾಕ್ಟ್ ದಾರರಾದ ಶರತ್ ಮಂಗಳೂರು ಅವರ ಪೈಕಿ ಆಗಮಿಸಿದ ಗಣ್ಯರನ್ನು ನ.26ರಂದು ಮುಂಡಾಜೆ ಬಂಟರ ಗ್ರಾಮ ಸಮಿತಿಯಿಂದ ಅತಿಥೇಯ ಮನೆಯಲ್ಲಿ ನಡೆಸಿದ ಸರಳ ಸಮಾರಂಭದಲ್ಲಿ ಗೌರವಿಸಲಾಯಿತು.
ಇದಲ್ಲದೆ ಮುಖ್ಯ ಆರ್ಥಿಕ ಸಹಕಾರ ನೀಡಿದ ಬೆಳ್ತಂಗಡಿ ಸುಮುಖ ಸುಪಾರಿ ಟ್ರೇಡರ್ಸ್ ಸದಾನಂದ ಶೆಟ್ಟಿ, ಕಾರ್ತಿಕ್ ಶೆಟ್ಟಿ ಕಾನರ್ಪ ಮನೆ ಮುಂಡಾಜೆ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ ಭಂಡಾರಿಗುಡ್ಡೆ ಅವರ ಸಾಮಾಜಿಕ ಕಳಕಳಿ ಹಾಗೂ ಪ್ರಯತ್ನವನ್ನು ಸ್ಮರಿಸಿಕೊಳ್ಳಲಾಯಿತು. ವೇದಿಕೆಯಲ್ಲಿ ಮುಂಡಾಜೆ ಗ್ರಾಮ ಸಮಿತಿ ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ, ಅಧ್ಯಕ್ಷ ಪ್ರದೀಪ್ ಶೆಟ್ಟಿ ನಾಗಂಡ, ಗೌರವ ಸಲಹೆಗಾರ ಪುರುಷೋತ್ತಮ ಶೆಟ್ಟಿ ಅಗರಿ, ಮುಂಡಾಜೆ ಗ್ರಾಮ ಸಮಿತಿಯ ಪುಷ್ಪರಾಜ ರೈ ಕಲ್ಲಹಿತ್ತಿಲು, ಕೋಶಾಧಿಕಾರಿ ಮಧು ಶೆಟ್ಟಿ ಹುರ್ತಾಜೆ, ಶಿವರಾಜ್ ರೈ ಸೋಮಂತಡ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ತನು ಮನ ಧನ ಸಹಕಾರ ನೀಡಿದ ಮುಂಡಾಜೆ ಗ್ರಾಮ ಸಮಿತಿಯ ಎಲ್ಲಾ ಬಂಧುಗಳು ಮತ್ತು ಉಜಿರೆ ವಲಯದ ಎಲ್ಲಾ ಬಂಧುಗಳಿಗೆ ಕೃತಜ್ಞತೆ ಸಮರ್ಪಿಸಲಾಯಿತು. ಕಾರ್ಯದರ್ಶಿ ನವೀತ್ ಶೆಟ್ಟಿ ನೈಯಾಲು ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

