Site icon Suddi Belthangady

ಡಿ.2: ಗುರುವಾಯನಕೆರೆ ಎಕ್ಸೆಲ್‌ ವಿದ್ಯಾಸಂಸ್ಥೆಯಲ್ಲಿ ಶ್ರೀ ದೇವಿಮಹಾತ್ಮೆ ಯಕ್ಷಗಾನ

ಗುರುವಾಯನಕೆರೆ: ಎಕ್ಸೆಲ್‌ ಸಮೂಹ ಸಂಸ್ಥೆ ಪ್ರಾಯೋಜಕತ್ವದಲ್ಲಿ ಡಿ.2ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ. ಅರಮಲೆಬೆಟ್ಟ ಕ್ಯಾಂಪಸ್‌ ಆವರಣದಲ್ಲಿ ಸಂಜೆ 6 ಗಂಟೆಯಿಂದ ನಡೆಯಲಿರುವ ಯಕ್ಷಗಾನ ಬಯಲಾಟದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಇರಲಿದೆ.

ಸಂಜೆ ನಡೆಯಲಿರುವ ಶ್ರೀ ದೇವಿ ಮಹಾತ್ಮೆ ಬಯಲಾಟದ ಪ್ರಯುಕ್ತ ವಿದ್ಯಾಸಾಗರ ಕ್ಯಾಂಪಸ್‌ನಲ್ಲಿ ಚೌಕಿ ಪೂಜೆ ನೆರವೇರಿದ್ದು, ಎಕ್ಸೆಲ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಸುಮಂತ್‌ ಕುಮಾರ್‌ ಜೈನ್‌, ಅವರ ತಂದೆ ಸತೀಶ್‌ ಕುಮಾರ್‌, ತಾಯಿ ಶುಭಲತಾ ಸತೀಶ್‌, ವಿದ್ಯಾಸಾಗರ ಕ್ಯಾಂಪಸ್‌ ಪ್ರಾಂಶುಪಾಲರಾದ ನವೀನ್‌ ಕುಮಾರ್‌ ಮರಿಕೆ, ಅರಮಲೆ ಬೆಟ್ಟ ಕ್ಯಾಂಪಸ್‌ ಪ್ರಾಂಶುಪಾಲರಾದ ಪ್ರಜ್ವಲ್‌ ಕಜೆ, ಪ್ರದೀಪ್‌ ಶೆಟ್ಟಿ, ಆನಂದ್‌ ಶೆಟ್ಟಿ, ಶಿಕ್ಷಕ ವರ್ಗ ಹಾಘೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಯಕ್ಷಗಾನದ ಮುಂಚಿತವಾಗಿ ಅರಮಲೆ ಬೆಟ್ಟ ಕ್ಯಾಂಪಸ್‌ನಲ್ಲಿಯೂ ಮೆರವಣಿಗೆ ಸಹಿತ ಚೌಕಿ ಪೂಜೆ ನಡೆಯಲಿದೆ.

Exit mobile version