ಮಿತ್ತಬಾಗಿಲು: ಗ್ರಾಮದ ದಿಡುಪೆಯ ವಿದ್ಯಾನಗರ ಅಡ್ಕ ರಮೇಶ್ ಗೌಡ ಅವರ ಮನೆಗೆ ನ.30ರಂದು ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಭೇಟಿ ಮಾಡಿ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿ ಮತ್ತು ಆರ್ಥಿಕ ಸಹಾಯ ನೀಡಲಾಯಿತು.
ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಸಕ್ರಿಯ ಜವಾಬ್ದಾರಿತರಾಗಿರುವ ಅವರು ಕಟ್ಟಡ ಕೂಲಿ ಕಾರ್ಮಿಕರಾಗಿದ್ದು, ನ. 7ರಂದು ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಟ್ಟಡದ ಮೇಲಿಂದ ಆಯತಪ್ಪಿ ಬಿದ್ದು ಬಲಗಾಲಿನ ಮೊಣಗಂಟಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುತ್ತಾರೆ. ಆದ್ದರಿಂದ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಭೇಟಿ ನೀಡಿ ಆರೋಗ್ಯ ಬಗ್ಗೆ ವಿಚಾರಿಸಿ ಆರ್ಥಿಕ ಸಹಾಯ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷರಾದ ಕರಿಯ ಗೌಡ ಹಾಗೂ ದಿಲೀಪ್ ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ KMC ಹಾಸ್ಪಿಟಲ್ ಮಂಗಳೂರು, ಸೇವಾ ಸಮಿತಿಯ ಅಧ್ಯಕ್ಷ ತೀಕ್ಷಿತ್ ಕೆ. ಕಲ್ಬೆಟ್ಟು, ಉಪಾಧ್ಯಕ್ಷ ಯೋಗೀಶ್ ಗೌಡ ದರ್ಕಸ್, ಹರೀಶ್ ಗೌಡ, ಪದ್ಮನಾಭ ಗೌಡ ಕೆಮ್ಮಟೆ, ಶಿವರಾಮ ಗೌಡ, ಜನಾರ್ಧನ ಗೌಡ ವಿದ್ಯಾನಗರ, ಕಮಲಾಕ್ಷ ಗೌಡ ಕೊಟ್ರಡ್ಕ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

