ಮಲವಂತಿಗೆ: ಶಾಖೆಗೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಪಳಂದ್ರೋಟ್ಟುನಿಂದ ಕೊಟ್ರಡ್ಕ ಹಾಗೂ ಕಜಕ್ಕೆ, ಶಿರಾಡಿ ಕ್ರಾಸ್ ಪನಿಕ್ಕಲ್ ಕಡೆಯಿಂದ ಹಾಲು ತೆಗೆದುಕೊಂಡು ಬರಲು ತುಂಬಾ ದೂರದಿಂದ ಬರುವ ಮನೆಗಳಿಗೆ ಅನುಕೂಲತೆಯ ಉದ್ದೇಶದಿಂದ ಈ ಪ್ರದೇಶದ ಜನರ ಬೇಡಿಕೆಯಂತೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರೋತ್ಸಾಹದೊಂದಿಗೆ ಡಿ.1ರಂದು ಬೆಳಗ್ಗೆ ಸಂಚಾರಿ ವಾಹನದ ಉದ್ಘಾಟನೆಯನ್ನು ಶ್ರೀ ಶಿರಾಡಿ ದೈವಸ್ಥಾನದ ಮುಂಭಾಗದಲ್ಲಿ ಚನನ ಗೌಡ ಮೈರ್ನೋಡಿ ಅವರು ದೀಪ ಪ್ರಜ್ವಲನಾ ಮಾಡುವ ಮೂಲಕ ಚಾಲನೆಯನ್ನು ನೀಡಲಾಯಿತು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘದ ಉಪ ವ್ಯವಸ್ಥಾಪಕ ಡಾ. ಸತೀಶ್ ರಾವ್, ವಿಸ್ತರಣಾ ಅಧಿಕಾರಿಗಳಾದ ಸಂದೀಪ್ ಜೈನ್, ಸಂಘದ ಅಧ್ಯಕ್ಷ ಪುರಂದರ ಗೌಡ, ಉಪಾಧ್ಯಕ್ಷ ಸಚಿನ್ ಗೌಡ, ಉದ್ಯಮಿಗಳಾದ ಮಧುಸೂದನ್ ಮಲ್ಲ, ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ಕಜಕ್ಕೆ, ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ತೀಕ್ಷಿತ್ ಕೆ. ಕಲ್ಬೆಟ್ಟು, ರಾಧಕೃಷ್ಣ ಮಜಲು, ಸಹಕಾರ ಸಂಘದ ನಿರ್ದೇಶಕರು, ಕಾರ್ಯದರ್ಶಿ ಮತ್ತು ಸಿಬ್ಬಂದಿಗಳು ಹಾಗೂ ಸಂಚಾರಿ ವಾಹನ ಮಾಲಕ ಆಮೃತ್ ಪಳಂದ್ರೋಟ್ಟು ಹಾಗೂ ಊರಿನ ಬಂಧುಗಳು ಉಪಸ್ಥಿತರಿದ್ದು, ಈ ಸಂಚಾರಿ ವಾಹನದ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿ ಸೂ -1. ಬಾಕಿ ಉಳಿದ ವಲಯಗಳಿಗೂ ಅವಶ್ಯಕತೆ ಇದ್ದಲ್ಲಿ ವಾಹನ ವ್ಯವಸ್ಥೆ ಯನ್ನು ಕಲ್ಪಿಸಿಕೊಡಲಾಗುವುದು.
2. ವಾಹನ ಬಾಡಿಗೆಯನ್ನು ಫಲಾನುಭವಿಗಳೇ ಭರಿಸುವುದು.

