Site icon Suddi Belthangady

ನೀವು ಬ್ಯಾಂಕಿಂಗ್ ಹಾಗೂ ಕೋ-ಆಪರೇಟಿವ್ ಕ್ಷೇತ್ರಗಳ ಉದ್ಯೋಗಾಕಾಂಕ್ಷಿಗಳಾಗಿದ್ದೀರಾ…?ವಿದ್ಯಾಮಾತಾ ಅಕಾಡೆಮಿಯಲ್ಲಿದೆ ತರಬೇತಿ ಪಡೆಯುವ ಅವಕಾಶ-3 ತಿಂಗಳ ಅವಧಿಯ ತರಬೇತಿಗೆ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಿದ ಪ್ರತಿಷ್ಠಿತ ತರಬೇತಿ ಸಂಸ್ಥೆ

ಬೆಳ್ತಂಗಡಿ: ಬ್ಯಾಂಕಿಂಗ್ ಹಾಗೂ ಕೋ-ಆಪರೇಟಿವ್ ಕ್ಷೇತ್ರದಲ್ಲಿ ಉದ್ಯೋಗವನ್ನು ಅರಸುತ್ತಿರುವ ಯುವ ಆಕಾಂಕ್ಷಿಗಳು ಸೂಕ್ತ ಮಾಹಿತಿ ಹಾಗೂ ಪೂರ್ವ ಸಿದ್ದತಾ ತರಬೇತಿಗಳಿಂದ ವಂಚಿತರಾಗುವ ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಇಲಾಖೆಗಳಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ತರಬೇತಿ ನೀಡಿದ ಹೆಗ್ಗಳಿಕೆಯ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆ ಗಳ ತರಬೇತಿ ಸಂಸ್ಥೆಯಾದ ವಿದ್ಯಾಮಾತಾ ಅಕಾಡೆಮಿಯಲ್ಲಿ ಬ್ಯಾಂಕಿಂಗ್ ಹಾಗೂ ಕೋ ಆಪರೇಟಿವ್ ವಲಯದ ನೇಮಕಾತಿ ಪರೀಕ್ಷೆಗಳ ಪೂರ್ವ ಸಿದ್ದತಾ ತರಬೇತಿಗಳು ಪ್ರಾರಂಭವಾಗಿದ್ದು, ತರಬೇತಿಗಾಗಿ ದಾಖಲಾತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿರುತ್ತದೆ.

ವಿದ್ಯಾಮಾತಾ ಅಕಾಡೆಮಿ ಕಳೆದ ಹಲವು ವರ್ಷಗಳಲ್ಲಿ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ, ಕ್ಯಾಂಪ್ಕೋ ನೇಮಕಾತಿ, ಕೆ ಎಂ ಎಫ್ ನೇಮಕಾತಿಗಳು, ಕರ್ನಾಟಕ ಬ್ಯಾಂಕ್ ನೇಮಕಾತಿ ಸೇರಿದಂತೆ ವಿವಿಧ ಬ್ಯಾಂಕಿಂಗ್ ನೇಮಕಾತಿಗಳು ಅಲ್ಲದೇ ವಿವಿಧ ಇಲಾಖಾ ನೇಮಕಾತಿಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವ ಸಿದ್ದತಾ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರಸ್ತುತ ಕರ್ತವ್ಯದಲ್ಲಿರುವುದು ಗಮನಿಸಬೇಕಾದ ಅಂಶವಾಗಿದೆ, ಈ ಸಾಧನೆಯ ಹಾದಿಯನ್ನು ಮುಂದಿಟ್ಟುಕೊಂಡು ಸಾಗಲಿರುವ ಈ ತರಬೇತಿಗಳು ನೇರ ತರಗತಿಗಳು ಬೆಳಿಗ್ಗೆ 9.30 ರಿಂದ ಸಂಜೆ 3.30ರ ವರೆಗೆ ಮತ್ತು ಆನ್ಲೈನ್ ತರಗತಿಗಳು ರಾತ್ರಿ 8.00ರಿಂದ 9.00ರ ವರೆಗೆ ನಡೆಯುತ್ತದೆ.

ಈಗಾಗಲೇ ಅರ್ಜಿ ಸಲ್ಲಿಸಿರುವ ಹಾಗೂ ಮುಂದಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಹ ಈ ತರಬೇತಿಯ ಉಪಯೋಗವನ್ನು ಪಡೆಕೊಳ್ಳಲು ಸಂಸ್ಥೆಯ ಕಚೇರಿಯನ್ನು ಖುದ್ದಾಗಿ ಅಥವಾ ಕರೆಯ ಮೂಲಕ ಸಂಪರ್ಕಿಸಿ ದಾಖಲಾತಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿಯ 9620468869/ 9148935808 ಫೋನ್ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Exit mobile version