Site icon Suddi Belthangady

ಮರೋಡಿ: ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ವೈಯಕ್ತಿಕ ಕಾರಣಗಳಿಂದ ವ್ಯಕ್ತಿಯೊಬ್ಬರು ಮನೆಯ ಕೊಟ್ಟಿಗೆಯ ಪಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೇಣೂರು ಪೊಲೀಸ್‌ ಠಾಣಾ ವ್ಯಾಪ್ತಿಯ ಮರೋಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕಂಬಳದಡ್ಕ ನಿವಾಸಿ ಗೋಪಾಲ ಪೂಜಾರಿ ರವರ ಪುತ್ರ ಅಶೋಕ್(54) ಎಂಬವರು ಯಾವುದೋ ಕಾರಣದಿಂದ ನೊಂದು ನ.30ರಂದು ಬೆಳಗ್ಗೆ ಕಂಬಳದಡ್ಕ ಮನೆಯ ಪಕ್ಕದ ಕೊಟ್ಟಿಗೆಯ ಪಕಾಸಿಗೆ ನೈಲಾನ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೃತಪಟ್ಟ ಅಶೋಕ್‌ ತಂದೆ ಗೋಪಾಲ ಪೂಜಾರಿ ವೇಣೂರು ಪೊಲೀಸ್ ಠಾಣೆಗೆ ನ.30 ರಂದು ದೂರು ನೀಡಿದ್ದಾರೆ. ಅದರಂತೆ ವೇಣೂರು ಪೊಲೀಸರು ಯುಡಿಆ‌ರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version