Site icon Suddi Belthangady

ಕನ್ಯಾಡಿ: ಸೇವಾಭಾರತಿಯ ನೂತನ ಕಾರ್ಯಾಲಯದ ವಾಸ್ತುಪೂಜೆ ಹಾಗೂ ಪ್ರವೇಶ

ಕನ್ಯಾಡಿ: ಸೇವಾಭಾರತಿ ಕಾರ್ಯಾಲಯದ ಸೇವಾನಿಕೇತನ ಹೊಸ ಕಟ್ಟಡದ ವಾಸ್ತುಪೂಜೆಯು ನ.27ರಂದು ನೆರವೇರಿತು. ಅದರ ಮುಂದುವರೆದ ಕಾರ್ಯಕ್ರಮವಾಗಿ ನ. 28ರಂದು ನವೀನ ಕಟ್ಟಡದಲ್ಲಿ ಕಾರ್ಯಾಲಯ ಪ್ರವೇಶ ಹಾಗೂ ಆಶ್ಲೇಷ ಬಲಿ ಪ್ರಧಾನವಾಗಿ ನಡೆಯಿತು. ಸಾಯಂಕಾಲ 6ಗಂಟೆಗೆ ದುರ್ಗಾಪೂಜೆ ಜರುಗಿತು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಅನೇಕ ಗಣ್ಯರು, ಸಮಾಜಸೇವಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಭಜನೆಯ ಮೂಲಕ ದೇವರ ಸ್ತುತಿ ಕಾರ್ಯಕ್ರಮಕ್ಕೆ ಭಕ್ತಿಪರ ವಾತಾವರಣದ ಸೊಬಗು ಹೆಚ್ಚಿಸಿತು.

ಹೊಸ ಕಟ್ಟಡದ ಆರಂಭದೊಂದಿಗೆ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಪುನಶ್ಚೇತನವನ್ನು ಪಡೆದುಕೊಂಡು ಸ್ವಾವಲಂಬನೆಯತ್ತ ಸಾಗುವಂತೆ ಹಾಗೂ ಸೇವಾಭಾರತಿಯ ವಿವಿಧ ಸೇವಾಚಟುವಟಿಕೆಗಳು ಈ ಹೊಸ ಕಟ್ಟಡದ ಮೂಲಕ ಮತ್ತಷ್ಟು ಸಕ್ರಿಯವಾಗಿ ನಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು.

Exit mobile version