ಬೆಳ್ತಂಗಡಿ: ಗುರುವಾಯನಕೆರೆಯ ಎಕ್ಸೆಲ್ ಕಾಲೇಜಿನ ಅರಮಲೆ ಬೆಟ್ಟ ಆವರಣದಲ್ಲಿ ನ. 28 ರಂದು ಎಕ್ಸೆಲ್ ಪರ್ಬ-2025 ನ್ನು ಕನ್ನಡದ ಮೇರು ನಟ ರಮೇಶ್ ಅರವಿಂದ್ ಉದ್ಘಾಟಿಸಿದರು. ಇದೆ ಸಂದರ್ಭದಲ್ಲಿ ಎಕ್ಸೆಲ್ ಬೆಳಕು ಫೌಂಡೇಶನ್ ಗೆ ಸಾಂಕೇತಿಕ ಚಾಲನೆ ನೀಡಲಾಯಿತು.
ಭಾರತ ಪರಿಕ್ರಮ ಯಾತ್ರಾ ಸಾಧಕ ಸೀತಾರಾಮ ಕೆದಿಲಾಯ, ಪತ್ರಕರ್ತ ಯೋಗೀಶ್ ಹೊಳ್ಳ ಎಂ. ಉಪಸ್ಥಿತರಿದ್ದರು. ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು. ಅರಮಲೆ ಬೆಟ್ಟ ಕ್ಯಾಂಪಸ್ ಪ್ರಾಂಶುಪಾಲ ಡಾ. ಪ್ರಮೋದ್ ಕಜೆ, ವಿದ್ಯಾಸಾಗರ ಕ್ಯಾಂಪಸ್ ಪ್ರಾಂಶುಪಾಲ ಡಾ. ನವೀನ್ ಮರಿಕೆ ಗೌರವ ಉಪಸ್ಥಿತಿ ವಹಿಸಿದ್ದರು.

