ಮರೋಡಿ: ಗ್ರಾಮ ಅರಣ್ಯ ಸಮಿತಿಯ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಬಗ್ಗೆ ನ. 28ರಂದು ಅರುಣೋದಯ ಯುವಕ ಮಂಡಲ ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಯಶೋಧರ ಬಂಗೇರ, ಮೂಡಬಿದ್ರಿ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಶ್ರೀಧರ್ ಪಿ., ಮರೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಬುಣ್ಣನ್, ಗ್ರಾಮ ಅರಣ್ಯ ಸಮಿತಿ ಮಾಜಿ ಅಧ್ಯಕ್ಷ ಜಯಂತ ಕೋಟ್ಯಾನ್, ಕಾರ್ಯದರ್ಶಿ / ಉಪ ವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ವೇಣೂರ್ ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಮರೋಡಿ ಗ್ರಾಮ ಆಡಳಿತ ಅಧಿಕಾರಿ ಧನುಷ್, ಗಸ್ತು ಅರಣ್ಯ ಪಾಲಕ ಮಂಜುನಾಥ್ ಸವಳಿ, ವಿವಿಧ ಸ್ವಸಹಾಯ ಸಂಘ ಗಳ ಸದಸ್ಯರು, ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರಶಾಂತ್, ಹರೀಶ್ ಮತ್ತು ರೋನಾಲ್ಡ್ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಜಯಂತ ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂಬು, ಪ್ರಮೀಳಾ, ಅಶೋಕ ಪೂಜಾರಿ, ಪ್ರೇಮಾ, ರಾಜು ಪೂಜಾರಿ, ಸುರೇಖಾ, ವಾಮನ ಭಂಡಾರಿ, ಶುಭರಾಜ್ ಹೆಗ್ಡೆ, ವಾರಿಜ ಮತ್ತು ಉಷಾ ಆಯ್ಕೆಯಾದರು.

