ಉಜಿರೆ: ಎಸ್. ಡಿ. ಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ, ಪ್ರಖ್ಯಾತ ವ್ಯಂಗ್ಯಚಿತ್ರಕಾರ ಶೈಲೇಶ್ ಉಜಿರೆ ಮತ್ತೆರಡು ರಾಷ್ಟ್ರಮಟ್ಟದ ಬಹುಮಾನಕ್ಕೆ ಪಾತ್ರವಾಗಿದ್ದಾರೆ. ಅನ್ ಫೋಲ್ಡ್ ಡ್ರೀಮ್ಸ್ ಆಯೋಜಿಸಿರುವ ರಾಷ್ಟ್ರಮಟ್ಟದ ವ್ಯಂಗ್ಯ ಭಾವಚಿತ್ರ ಸ್ಪರ್ಧೆಯಲ್ಲಿ ಉಜಿರೆ ಶೈಲೇಶ್ ಕುಮಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಜೊತೆ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಸಮಾಧಾನಕಾರಬಹುಮಾನಕ್ಕೆ ಪಾತ್ರವಾಗಿದ್ದಾರೆ.
ಹಲವಾರು ರಾಷ್ಟ್ರೀಯ ಬಹುಮಾನಗಳನ್ನು ಪಡೆದಿರುವ ಶೈಲೇಶ್ ಉಜಿರೆಯವರು ಈ ಮೂಲಕ ಮತ್ತೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮರೆದಿದ್ದಾರೆ. ಶೈಲೇಶ್ ಉಜಿರೆಯವರು ಸುದ್ದಿ ಬಿಡುಗಡೆಯ ದೀಪಾವಳಿ ಸಂಚಿಕೆಗೆ ಹಲವು ವ್ಯಂಗ್ಯಚಿತ್ರಗಳನ್ನು ಬರೆದು ಸಹಕಾರ ನೀಡಿದ್ದಾರೆ.
ರಾಷ್ಟ್ರಮಟ್ಟದ ವ್ಯಂಗ್ಯ ಭಾವಚಿತ್ರ ಸ್ಫರ್ಧೆಯಲ್ಲಿ ಉಜಿರೆ ಶೈಲೇಶ್ ರಿಗೆ ದ್ವಿತೀಯ ಸ್ಥಾನ-ವ್ಯಂಗ್ಯ ಚಿತ್ರದಲ್ಲೂ ರಾಷ್ಟ್ರಮಟ್ಟದ ಪುರಸ್ಕಾರ

