Site icon Suddi Belthangady

ಎಸ್.ಡಿ.ಎಂ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕಾಲೇಜು: NIN ಪುಣೆ ರಾಷ್ಟ್ರೀಯ ನ್ಯಾಚುರೋಪಥಿ ಉತ್ಸವದಲ್ಲಿ ಸಮಗ್ರ ಪ್ರಶಸ್ತಿ

ಉಜಿರೆ: ಎಸ್.ಡಿ.ಎಂ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನಗಳ ಕಾಲೇಜು (SDMCNYS), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಚುರೋಪಥಿ (NIN) ಪುಣೆ ಆಯೋಜಿಸಿದ್ದ ನಾಲ್ಕು ದಿನಗಳ ‘ನಿಸರ್ಗಮ್– Healing & Wellness Festival 2025’ ಕಾರ್ಯಕ್ರಮದ ಅಂಗವಾಗಿ ನಡೆದ 8ನೇ ನ್ಯಾಚುರೋಪಥಿ ದಿನಾಚರಣೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಗಳಿಸಿ ಗಮನ ಸೆಳೆದಿದೆ.

ಈ ವರ್ಷದ ಉತ್ಸವದ ವಿಷಯ “ನ್ಯಾಚುರೋಪಥಿಯ ಮೂಲಕ ಸಹಜವಾಗಿ ತೂಕ ಇಳಿಕೆ” ಆಗಿತ್ತು. ಸಮಾರೋಪ ಸಮಾರಂಭವು ಅತ್ಯಂತ ವೈಭವದಿಂದ ನೆರವೇರಿದ್ದು, ಮಹಾರಾಷ್ಟ್ರ ರಾಜ್ಯಪಾಲಾ ಆಚಾರ್ಯ ದೇವವ್ರತ, ಸಂಸದ ಮತ್ತು ಕೇಂದ್ರ AYUSH ಸಚಿವರಾದ ಪ್ರತಾಪರಾವ್ ಜಾಧವ್, ಡಾ. ಕವಿತಾ ಜೈನ್, ಅಮರೆಂದ್ರ ಸಿಂಗ್, ಮತ್ತು ಅಂಚೆ ಇಲಾಖೆಯ ಅಧಿಕಾರಿ ಸುಚಿತಾ ಜೋಶಿ ಅವರ ಸಾರಥ್ಯದಲ್ಲಿ ಜರುಗಿತು.

ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಮೂರು ದಿನಗಳ ಸಸ್ಯಾಹಾರಿ ಆಹಾರ ಉತ್ಸವದಲ್ಲಿ , ನೈಸರ್ಗಿಕ ಆಹಾರ ತಯಾರಿಕೆ, ಆಹಾರ ಪ್ರದರ್ಶನಗಳು ಹಾಗೂ ಆರೋಗ್ಯಕರ ಜೀವನಶೈಲಿ ಕುರಿತು ವೈವಿಧ್ಯಮಯ ಕಾರ್ಯಕ್ರಮಗಳು ನಡೆಸಲ್ಪಟ್ಟವು. ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ , ಆಹಾರಶಾಸ್ತ್ರ ಮತ್ತು ಪೌಷ್ಠಿಕತೆ ವಿಭಾಗದ ಡೀನ್ ಡಾ. ಗೀತಾ ಬಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ 20 ಸದಸ್ಯರ SDM ತಂಡ (17 ವಿದ್ಯಾರ್ಥಿಗಳು ಹಾಗೂ ಸಹಾಯಕ ಪ್ರಾಧ್ಯಾಪಕರು ಡಾ. ಸುಹಾಸ್ ಪೈ, ಡಾ. ಗೀತಾಶ್ರೀ ಪೂಜಾರಿ ಮತ್ತು ಡಾ. ಸಾಂಗ್ಬಮ್ ರನಿಟಾ ಕಾಲೇಜನ್ನು ಪ್ರತಿನಿಧಿಸಿ, ಶೈಕ್ಷಣಿಕ, ಸೃಜನಾತ್ಮಕ ಹಾಗೂ ಕೌಶಲ್ಯಾಧಾರಿತವಾದ ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಹಾಗೂ ಸಮಗ್ರ ಪ್ರದರ್ಶನ ನೀಡಿದರು.

ಇಂಟರ್ನ್ ಶಿಪ್ ವಿಭಾಗದಲ್ಲಿ, ದಿವ್ಯಾ ಬಿ.ಯು. ಅವರು ಐಡಿಯಾ ಹ್ಯಾಕಥಾನ್‌ನಲ್ಲಿ 1ನೇ ಬಹುಮಾನ ಪಡೆದರು. ಅಂತಿಮ ವರ್ಷದ ವಿದ್ಯಾರ್ಥಿ ಧಾರ್ಮಿಕ ಗಡಾ ಮತ್ತು ತನ್ವಿ ಅವರೊಂದಿಗೆ ಸೇರಿ ವೈದ್ಯಕೀಯ ಕ್ವಿಜ್‌ನಲ್ಲಿ 1ನೇ ಸ್ಥಾನ ಗಳಿಸಿದರು. ದಿವ್ಯಾ ಮತ್ತು ತನ್ವಿ ಬುಕ್ ಬೈಟ್ ಸ್ಪರ್ಧೆಯಲ್ಲಿ 3ನೇ ಬಹುಮಾನ ಕೂಡ ಪಡೆದರು.

ಎರಡನೇ ವರ್ಷದ ವಿದ್ಯಾರ್ಥಿಗಳಲ್ಲಿ, ತನುವಿ ತನಾವತ್ ಅವರು ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಇಶಿಕಾ ಬಹುಮಾನಗಳಿಸಿದರು.ಮುಕ್ತ ಪ್ರಬಂಧ ಸ್ಪರ್ಧೆಯಲ್ಲಿ 2ನೇ ಸ್ಥಾನ, ಮತ್ತು ಮಾರ್ಕನ್ ಅವರು ಯೋಗಾಸನ ಸ್ಪರ್ಧೆಯಲ್ಲಿ 2ನೇ ಸ್ಥಾನ ಗಳಿಸಿದರು.

ಪ್ರಥಮ ವರ್ಷದ ವಿದ್ಯಾರ್ಥಿಗಳಲ್ಲಿ, ಸ್ಮೃತಿ ಮತ್ತು ತಂಡ ಅವರು ರೀಲ್ ಮೆಕಿಂಗ್ ಸ್ಪರ್ಧೆಯಲ್ಲಿ 1ನೇ ಬಹುಮಾನ ಪಡೆದರು. ವಿಭಿನ್ನ ವಿಭಾಗಗಳಲ್ಲಿ ಭರ್ಜರಿ ಗೆಲುವುಗಳನ್ನು ದಾಖಲಿಸಿದ ಪರಿಣಾಮ, SDM ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನಗಳ ಕಾಲೇಜಿಗೆ ಪ್ರತಿಷ್ಠಿತ ಸಮಗ್ರ ಪ್ರಶಸ್ತಿಯನ್ನು ಪಡೆಯಿತು.

ಕಾಲೇಜಿನ ಆಡಳಿತ ಮಂಡಳಿಯು ಸಂಸ್ಥೆಗೆ ರಾಷ್ಟ್ರೀಯ ಮಟ್ಟದ ಕೀರ್ತಿಯನ್ನು ತಂದುಕೊಟ್ಟ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಮಹಾವಿದ್ಯಾಲಯದ ತಂಡದ ಮೇಲೆ ಹೆಮ್ಮೆ ವ್ಯಕ್ತಪಡಿಸಿ, ನ್ಯಾಚುರೋಪಥಿ, ಸಂವಹನ ಹಾಗೂ ನವೀನತೆಗಳಲ್ಲಿ ತೋರಿದ ಶ್ರೇಷ್ಠತೆಯನ್ನು ಪ್ರಶಂಸೆ ವ್ಯಕ್ತಪಡಿಸಿದೆ.

Exit mobile version