Site icon Suddi Belthangady

ಮಡಂತ್ಯಾರು: ಕಾರು ಮತ್ತು ಬೈಕ್ ಡಿಕ್ಕಿ

ಮಡಂತ್ಯಾರು: ಕೊಲ್ಪದಬೈಲು ಪೆಟ್ರೋಲ್ ಪಂಪ್ ಎದುರು ಕಾರು ಮತ್ತು ಬೈಕ್‌ ನಡುವೆ ಅಪಘಾತ ನಡೆದ ಘಟನೆ ನ. 28ರಂದು ನಡೆದಿದೆ. ಕಾರು ಮತ್ತು ಬೈಕ್‌ ಎರಡು ಬೆಳ್ತಂಗಡಿ ಕಡೆಯಿಂದ ಸಾಗುತ್ತಿದ್ದು ಬೈಕ್‌ ಸವಾರ ಕಾರು ಬರುತ್ತಿದ್ದುದನ್ನು ಗಮನಿಸದೆ ಪೆಟ್ರೋಲ್ ಪಂಪಿನ ಕಡೆ ತಿರುಗಿಸಿದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಬೈಕ್ ಕಾರಿನಡಿ ಸಿಲುಕಿ ಬೈಕ್‌ ಸವಾರನಿಗೆ ಗಂಭೀರ ಗಾಯವಾಗಿದೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version