Site icon Suddi Belthangady

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಉಜಿರೆ ಎಸ್. ಡಿ.ಎಮ್ ಪದವಿ ಪೂರ್ವ ಕಾಲೇಜಿನ 5 ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆ

ಉಜಿರೆ: ಸಾರ್ವಜನಿಕ ಶಿಕ್ಷಣ ಇಲಾಖೆ (ಪದವಿ ಪೂರ್ವ) ದ.ಕ.ಅವರು ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ವಿಭಾಗಗಳಲ್ಲಿ ಬಹುಮಾನ ಪಡೆದು ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.

ಪ್ರಥಮ ಪಿಯುಸಿ ವಿಭಾಗದಲ್ಲಿ , ಪೆನ್ಸಿಲ್ ಸ್ಕೆಚ್ ಸ್ಪರ್ಧೆಯಲ್ಲಿ ಸಾತ್ವಿಕ್ ಭಟ್ ಪ್ರಥಮ ಸ್ಥಾನ. ಏಕಪಾತ್ರಾಭಿನಯದಲ್ಲಿ ಮನೋಜ್ ಪ್ರಥಮ ಸ್ಥಾನ. ಇಂಗ್ಲಿಷ್ ಚರ್ಚಾಸ್ಪರ್ಧೆಯಲ್ಲಿ ಸಾಗರಿಕಾ ಪ್ರಥಮ ಸ್ಥಾನ.
ದ್ವಿತೀಯ ಪಿಯುಸಿ ವಿಭಾಗದ ಪೆನ್ಸಿಲ್ ಸ್ಕೆಚ್ ಸ್ಪರ್ಧೆಯಲ್ಲಿ ಪ್ರೀತಮ್ ಶೆಟ್ಟಿಗಾರ್ ಪ್ರಥಮ ಸ್ಥಾನ.ಏಕ ಪಾತ್ರಾಭಿನಯ ಸ್ಪರ್ಧೆಯಲ್ಲಿ ಹಂಸಿನಿ ಭಿಡೆ ಪ್ರಥಮ ಸ್ಥಾನ, ಕನ್ನಡ ಚರ್ಚಾ ಸ್ಪರ್ಧೆ ಶ್ರೀಪೂರ್ಣಾ ತೃತೀಯ ಸ್ಥಾನ.ಜಾನಪದ ನೃತ್ಯ ಅನಘಾ ತೃತೀಯ ಸ್ಥಾನ ಪಡೆದಿರುತ್ತಾರೆ.

ಪ್ರಥಮ ಸ್ಥಾನ ಪಡೆದಂತಹ ಐದು ವಿದ್ಯಾರ್ಥಿಗಳು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಪ್ರಾಂಶುಪಾಲ ಪ್ರಮೋದ್ ಕುಮಾರ್ ಬಿ., ಉಪ ಪ್ರಾಂಶುಪಾಲ ರಾಜೇಶ್ ಬಿ., ಸಾಂಸ್ಕೃತಿಕ ಸಮಿತಿಯ ಸಂಯೋಜಕ ನಾಗರಾಜ್ ಬಿ. ಅಭಿನಂದಿಸಿದ್ದಾರೆ. ಉಪನ್ಯಾಸಕಿಯರಾದ ಅಮೃತಾ ಎನ್., ಸುಚೇತಾ, ಅಂಬಿಕಾ ಹಾಗೂ ಸಾಂಸ್ಕೃತಿಕ ಸಮಿತಿಯ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

Exit mobile version