Site icon Suddi Belthangady

ಜಿ. ಕೃಷ್ಣ ಬೆಳ್ತಂಗಡಿ ಅವರಿಗೆ ಕಟೀಲಿನಲ್ಲಿ “ಯುವ ರತ್ನ” ಪ್ರಶಸ್ತಿ ಪ್ರಧಾನ

ಬೆಳ್ತಂಗಡಿ: ಬೆಂಗಳೂರಿನ ಜಾಗೃತಿ ಟ್ರಸ್ಟ್ ಅವರು ನ.23ರಂದು ಕಟೀಲು ಸರಸ್ವತಿ ಭವನದಲ್ಲಿ ಆಯೋಜಿಸಿದ್ದ “ಸಾಂಸ್ಕೃತಿಕ ವೈಭವ” ಕಾರ್ಯಕ್ರಮದಲ್ಲಿ ಸಿನಿಮಾ ಹಾಗೂ ಜಾಹೀರಾತು ಚಿತ್ರ ನಿರ್ದೇಶಕ ಜಿ. ಕೃಷ್ಣ ಬೆಳ್ತಂಗಡಿ ಅವರಿಗೆ “ಯುವ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಥೆಯ ಮೋಹನ್ ಆಳ್ವ, ಕರ್ನಾಟಕ ಸರಕಾರದ ಸಾರಿಗೆ ಇಲಾಖೆಯ ಉಪ ಆಯುಕ್ತ ಮಂಜುನಾಥ್, ಕಿನ್ನಿಗೋಳಿಯ ಭುವನಭಿರಾಮ್ ಉಡುಪ, ಚಲನಚಿತ್ರ ಕಲಾವಿದರಾದ ಪ್ರಕಾಶ್ ತುಮಿನಾಡು, ಅವಿನಾಶ್ ಶೆಟ್ಟಿ, ಮಂಗಳೂರು ಸಾರಿಗೆ ಇಲಾಖೆಯ ಶ್ರೀಧರ್ ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

Exit mobile version